ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಿ;ಯುವಾ ಬ್ರಿಗೇಡ್

ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಲು ಒತ್ತಾಯಿಸಿ ಕೊಪ್ಪಳದಲ್ಲಿ ಯುವಾ ಬ್ರಿಗೇಡ್ ಸಂಚಾಲಕರು ಮೌನ ಪ್ರತಿಭಟನೆ ನಡೆಸಿದರು. ಸಂಚಾಲಕರಾದ ನಂದೀಶ, ವೀರೇಶ, ಮಹಾವೀರ ಜೈನ್, ಪ್ರಮೋದ, ಶಶಾಂಕ ಪಾಟೀಲ್, ಸಚಿನ್ ಇತರರಿದ್ದರು.
ಹಿಂದು ಕಾರ್ಯಕರ್ತರಿಗೆ ರಕ್ಷಣೆ ನೀಡಲು ಒತ್ತಾಯಿಸಿ ಕೊಪ್ಪಳದಲ್ಲಿ ಯುವಾ ಬ್ರಿಗೇಡ್ ಸಂಚಾಲಕರು ಮೌನ ಪ್ರತಿಭಟನೆ ನಡೆಸಿದರು. ಸಂಚಾಲಕರಾದ ನಂದೀಶ, ವೀರೇಶ, ಮಹಾವೀರ ಜೈನ್, ಪ್ರಮೋದ, ಶಶಾಂಕ ಪಾಟೀಲ್, ಸಚಿನ್ ಇತರರಿದ್ದರು.
Published on

ಕೊಪ್ಪಳ: ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ತಡೆ ಹಾಗೂ ಹಂತಕರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.


ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ಮುಂದುವರಿದಿದೆ. ಜು.8ರಂದು ತಿ.ನರಸೀಪುರದಲ್ಲಿ ಹಿಂದು ಕಾರ್ಯಕರ್ತ ವೇಣುಗೋಪಾಲನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ ಮಾಡಿದ್ದು, ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಡೆ ಭಯದ ವಾತಾವರಣ ಆವರಿಸಿದೆ.


ಎರಡೂ ಹತ್ಯೆಗಳು ಸಮಾಜದ ಸ್ವಾಸ್ಥೃ ಕೆಡಿಸಿವೆ. ಹತ್ಯೆಗೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸಬೇಕು. ಹಿಂದು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಶಾಂತಿ ವಾತಾವರಣ ನಿರ್ಮಿಸಬೇಕು. ಸಮಾಜದ ಸ್ವಾಸ್ಥೃ ಹಾಳು ಮಾಡುವವರಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಚಾಲಕರಾದ ನಂದೀಶ, ವೀರೇಶ, ಮಹಾವೀರ ಜೈನ್, ಪ್ರಮೋದ, ಶಶಾಂಕ ಪಾಟೀಲ್, ಸಚಿನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net