ಎಸಿ ನೇತೃತ್ವದಲ್ಲಿ ತನಿಖೆಗೆ ಜಿಲ್ಲಾಧಿಕಾರಿ ಆದೇಶ

web
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನವಲಗುಂದದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ನಲ್ಲಿ ಅವ್ಯವಹಾರ ನಡೆದ ಕುರಿತು ಸ್ಥಳೀಯರಿಂದ ಸಲ್ಲಿಕೆಯಾದ ದೂರಿಗೆ ಜಿಲ್ಲಾಽಕಾರಿ ದಿವ್ಯ ಪ್ರಭು ಸ್ಪಂದಿಸಿದ್ದಾರೆ. ಹಣಕಾಸಿನ ಅವ್ಯವಹಾರ ಹಾಗೂ ದುರುಪಯೋಗದ ತನಿಖೆಗೆ ಉಪ ವಿಭಾಗಾಽಕಾರಿಯನ್ನು ನೇಮಿಸಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.
ಹೋಳಿ ಹುಣ್ಣಿಮೆಗೆ ಪ್ರತಿಷ್ಠಾಪನೆಯಾಗುವ ಶ್ರೀ ರಾಮಲಿಂಗ ಕಾಮಣ್ಣನ ದರ್ಶನ ಪಡೆಯಲು ಪ್ರತಿವರ್ಷ ಲಕ್ಷಾಂತರ ಜನರು ಬರುತ್ತಾರೆ. ಭಕ್ತರು ಕಾಣಿಕೆ ರೂಪದಲ್ಲಿ ಸಲ್ಲಿಸುವ ಹಣ, ಬಂಗಾರ, ಬೆಳ್ಳಿಯನ್ನು ಸಮರ್ಪಿಸುತ್ತಾರೆ. ಪ್ರತಿವರ್ಷ ಭಕ್ತರಿಂದ ಸಂಗ್ರಹವಾಗುವ ಕೋಟ್ಯಂತರ ರೂಪಾಯಿ ಹಣವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅಪ್ಪಣ್ಣ ಹಳ್ಳದ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದರು.
ಅವ್ಯವಹಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ತನಿಖೆ ನಡೆಸಿ ತಮ್ಮ ಕಾರ್ಯಾಲಯದ ಮುಜರಾಯಿ ಶಾಖೆಗೆ ವರದಿ ನೀಡುವಂತೆ ಉಪ ವಿಭಾಗಾಽಕಾರಿ ಶಾಲಂ ಹುಸೇನ್‌ಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net