ಆನ್ಲೈನ್ನಲ್ಲಿ ಕಾರ್ಯಕ್ರಮ ವೀಕ್ಷಣೆ

7.8 (1)
Published on

ಯಾದಗಿರಿ: ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಆಗಸ್ಟ​ 15ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದೃಶ್ಯಾವಳಿಗಳನ್ನು ಆನ್ಲೈನ್ ಮೂಲಕ ಸಾರ್ವಜನಿಕರು ಮನೆಗಳಲ್ಲಿಯೇ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ಧ್ವಜಾರೋಹಣದ ಪರೇಡ್ನಲ್ಲಿ ಸುಮಾರು 6 ರಿಂದ 8 ತಂಡಗಳಿಗೆ ಅವಕಾಶ ಮಾಡಿಕೊಡಲಾಗುವುದು, ಪೋಲಿಸ್ ಇಲಾಖೆ, ಎನ್ಎಸ್ಎಸ್, ಸ್ಕೌಟ್ಸ್ ಆಂಡ್ ಗೈಡ್ಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ತಂಡಗಳು ಸೇರಿ ಒಟ್ಟು ಶೇ.70 ಭಾಗವಹಿಸಲು ಅವಕಾಶ ಮಾಡಲಾಗುವುದು. ಅಲ್ಲದೆ ಅಂದಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ 30 ಜನ ಕೋವಿಡ್ ವಾರಿಯಸರ್್ಗಳನ್ನು ಸನ್ಮಾನಿಸಲಾಗುವುದು, ಕೋವಿಡ್-19 ದಿಂದ ಗುಣಮುಖರಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 10 ವರ್ಷದಿಂದ 60 ವರ್ಷದ ಮಕ್ಕಳು, ಗರ್ಬಿಣಿಯರು, ವೃದ್ಧರು ಭಾಗವಹಿಸುವಂತಿಲ್ಲ. ಕೋವಿಡ್-19 ಇರುವುದರಿಂದ ಸರಳವಾಗಿ ಮತ್ತು ಪ್ರತಿಯೊಬ್ಬರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರವಾಗಬೇಕಾಗಿದೆ ಎಂದ ಜಿಲ್ಲಾಧಿಕಾರಿಗಳು, ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ಬಡಾವಣೆಗಳಲ್ಲಿ ನಗರಸಭೆ ಸದಸ್ಯರು ಮುಂದಾಗಿ ತಮ್ಮ ಬಡಾವಣೆಗಳಲ್ಲಿ ಸ್ಕ್ರೀನಿಂಗ್, ಮಾಸ್ಕ್, ಸ್ಯಾನಿಟೈಜ್ ಮತ್ತು ಟೆಸ್ಟಿಂಗ್ ಮಾಡಿಸಬೇಕು. ಕೋಳಿವಾಡ, ಲಕ್ಷ್ಮಿ ನಗರ, ಲಾಡೀಸ್ ಗಲ್ಲಿ, ಸ್ಟೇಷನ್ ಏರಿಯಾದಲ್ಲಿ ಟೆಸ್ಟಿಂಗ್ ಮಾಡಿಸಬೇಕು. ಉತ್ತಮ ಲ್ಯಾಬ್ ಇರುವುದರಿಂದ ಟೆಸ್ಟಿಂಗ್ ಮಾಡಿದ 10 ರಿಂದ 30 ನಿಮಿಷದಲ್ಲಿ ಫಲಿತಾಂಶ ಲಭ್ಯವಾಗಲಿದೆ, ಈ ಹಿನ್ನಲೆ ಕೋವಿಡ್ ಪರೀಕ್ಷೆಗೆ ಸಾರ್ವಜನಿಕರು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net