

ಧಾರವಾಡ: ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ರೈತರ ಬೆಳೆಸಾಲವನ್ನು ಕಾಲಮಿತಿಯಲ್ಲಿ ಪುನರ್ ರಚಿಸಬೇಕು. ರೈತರಿಗೆ ಸಾಲ ತುಂಬುವ೦ತೆ ಒತ್ತಾಯಿಸುವುದು, ನೋಟಿಸ್ ನೀಡದಂತೆ ಸರ್ಕಾರ ಸೂಚಿಸಿದೆ. ಆದರೂ ಕೆಲ ಬ್ಯಾಂಕ್‌ಗಳು ರೈತರಿಗೆ ನೋಟೀಸ್ ನೀಡುತ್ತಿರುವುದು ಕಂಡುಬ೦ದಿದೆ. ಅಂಥ ಬ್ಯಾಂಕುಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಸಿದರು.
ತಮ್ಮ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬ್ಯಾಂಕರ್ಸ್ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಮತ್ತು ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇಲಾಖೆಗಳ ಶಿಪಾರಸು ಬಂದ ತಕ್ಷಣ ವಿಳಂಬ ಮಾಡದೆ ಸಾಲ ಮಂಜೂರಿ ಆಗಬೇಕು. ಗುರಿಯ ಪ್ರಗತಿಯನ್ನು ಪ್ರತಿ ಬ್ಯಾಂಕ್‌ಗಳು ಸಾಽಸಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವೂ ವಿಳಂಬವಾಗಬಾರದು ಎಂದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಮಾತನಾಡಿ, ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಗುರಿಗೆ ಅನುಗುಣವಾಗಿ ಕೆಲಸ ಮಾಡುತ್ತಿವೆ. ಸಬ್ಸಿಡಿ ಹಣ ಬಿಡುಗಡೆಯಾದ ತಕ್ಷಣ ಸಂಬ೦ಽಸಿದ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದರು.
ನಬಾರ್ಡ್ ಡಿಡಿಎಂ ಮಯೂರ ಕಾಂಬಳೆ ಮಾತನಾಡಿ, ೨೦೨೩- ೨೪ನೇ ಸಾಲಿನ ಪಿಎಲ್‌ಪಿಯ ೧೪,೪೦೦ ಕೋಟಿ ರೂಪಾಯಿ ಗುರಿಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ೬,೬೪೨ ಕೋಟಿ ರೂ. ಗುರಿ ಸಾಽಸಲಾಗಿದೆ ಎಂದರು.
ರಿಸರ್ವ ಬ್ಯಾಂಕ್ ಪ್ರತಿನಿಧಿ ಈಲಾ ಸಾಹೂ ಮಾತನಾಡಿ, ರೈತರ ಬೆಳೆಸಾಲವನ್ನು ಆದಷ್ಟು ಬೇಗ ಕೃಷಿ ಸಾಲವಾಗಿ ಪುನರ್ ರಚನೆ ಮಾಡಿ, ಬರಗಾಲದ ಸೌಲಭ್ಯಗಳನ್ನು ತಲುಪಿಸಬೇಕು ಎಂದರು
ಬ್ಯಾAಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ವಿ. ಶ್ರೀಹರಿ ವೇದಿಕೆಯಲ್ಲಿ ಇದ್ದರು.
ಧಾರವಾಡ ಜಿಲ್ಲಾ ನಬಾರ್ಡ್ ರೂಪಿಸಿರುವ ೨೦೨೪- ೨೫ನೇ ಸಾಲಿನ ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಪ್ಲಾನ್ ಬಿಡುಗಡೆಗೊಳಿಸಲಾಯಿತು.