21-45 ವರ್ಷದೊಳಗಿನವರಲ್ಲೇ ಹೆಚ್ಚು ಸೋಂಕು

DC RAVI
Published on

  • ವಿಜಯವಾಣಿ ಸುದ್ದಿಜಾಲ ಚಾಮರಾಜನಗರ
    21 ರಿಂದ 45 ವರ್ಷದೊಳಗಿನ ವ್ಯಕ್ತಿಗಳಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
    ಯುವ ಜನರು ಹೆಚ್ಚಾಗಿ ಪ್ರಯಾಣ ಬೆಳೆಸುವುದರಿಂದ ಮತ್ತು ರೋಗದ ಬಗ್ಗೆ ಉದಾಸೀನತೆ ತೋರುವುದರಿಂದಲೇ ಕರೊನಾ ಉಲ್ಬಣಗೊಳ್ಳುತ್ತಿದೆ. ಆದರೆ, ಪಾಸಿಟಿವ್ ಪ್ರಕರಣಗಳು ಹೆಚ್ಚಾದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಶನಿವಾರ ಫೇಸ್‌ಬುಕ್ ಲೈವ್ ಮೂಲಕ ತಿಳಿಸಿದರು.
    ಜಿಲ್ಲೆಯಲ್ಲಿ ಈವರೆಗೆ 23,428 ಜನರನ್ನು ಕರೊನಾ ಪರೀಕ್ಷೆಗೊಳಪಡಿಸಲಾಗಿದೆ. ಜುಲೈ ತಿಂಗಳಲ್ಲೇ ಸುಮಾರು 8 ಸಾವಿರ ಜನರ ಪರೀಕ್ಷೆ ಮಾಡಲಾಗಿದೆ. ಹೀಗೆ ಪರೀಕ್ಷೆ ಹೆಚ್ಚು ಮಾಡುತ್ತಿರುವುದರಿಂದಲೇ ಸೋಂಕಿತರು ಹೆಚ್ಚಾಗಿ ಪತ್ತೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಅಧಿಕಗೊಳ್ಳುವುದರಲ್ಲಿ ಸಂಶಯವಿಲ್ಲ. ಜಿಲ್ಲಾಡಳಿತ ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಮುಕ್ತ ವಿವಿ, ಸ್ನಾತಕೋತ್ತರ ಕೇಂದ್ರದ ಕಟ್ಟಡಗಳನ್ನು ಬಳಸಿಕೊಳ್ಳುತ್ತಿದೆ ಎಂದರು.

ಮಳೆಗಾಲದ ಹಿನ್ನೆಲೆ ಜನರು ಆರೋಗ್ಯದ ಮೇಲೆ ಕಾಳಜಿ ವಹಿಸಿ. ತಮ್ಮ ಭಾಗದಲ್ಲಿ ಸೋಂಕಿತರನ್ನು ಪತ್ತೆ ಮಾಡಲು ಸಹಕರಿಸಿ. ಕರೊನಾ ಸೇನಾನಿಗಳು ಜಾಗರೂಕತೆಯಿಂದ ಇದ್ದು, ಜನರ ಸೇವೆಯನ್ನು ಮಾಡಬೇಕೆಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net