

ಗೋಕಾಕ: ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ವತಿಯಿಂದ ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಹಿರಿಯ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕುರಿತು ರಾಜ್ಯದ ಗಡಿಗಳ ವಿಭಜನೆ ಮಾಡಲು ಡಿ.30ರ ವರೆಗೆ ಕಾಲಾವಕಾಶ ನೀಡಿದ್ದು, ಆದಷ್ಟು ಬೇಗ ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ವಿಭಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿಗೆ ಅವಕಾಶ ಕಲ್ಪಿಸಬೇಕು. ಸಚಿವರೇ ನೇತೃತ್ವ ವಹಿಸಿ ಗೋಕಾಕ ಜಿಲ್ಲೆಯನ್ನಾಗಿ ೂಷಿಸುವಂತೆ ಮನವಿ ಮಾಡಿದರು.
ಗೋಕಾಕ ನಗರ ವಾಣಿಜ್ಯ, ಉದ್ಯಮ, ಶಿಣ, ಕಷಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಭಿವದ್ಧಿ ಹೊಂದುತ್ತಿದೆ. ನಾಗರಿಕರಿಗೆ ಉತ್ತಮ ಸೇವಾ ಸೌಲಭ್ಯ ಹಾಗೂ ಆಡಳಿತ ಸೌಕರ್ಯ ಪೂರೈಸುವ ದೃಷ್ಟಿಯಿಂದ ಗೋಕಾಕ ಜಿಲ್ಲೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಈಗಾಗಲೇ ಜಿಲ್ಲೆಯ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಜತೆ ಜಿಲ್ಲಾ ಹೋರಾಟ ಸಮಿತಿ ನಿಯೋಗ ಕರೆದೊಯ್ಯಲು ಸಮಯ ಕಲ್ಪಿಸಲು ಸಮಯ ನಿಗದಿಪಡಿಸಲಾಗುವುದು ಎಂದರು. ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯ, ಶೂನ್ಯ ಸಂಪಾದನಾ ಮಠದ ಮುರುರಾಜೇಂದ್ರ ಸ್ವಾಮೀಜಿ, ನಗರಸಭೆ ಅಧ್ಯ ಪ್ರಕಾಶ ಮುರಾರಿ, ವಕೀಲರ ಸಂದ ಅಧ್ಯ ಸುಭಾಶ್ಚಂದ್ರ ಪಾಟೀಲ, ಬಸವರಾಜ ಖಾನಪ್ಪನವರ, ಸಿ.ಡಿ. ಹುಕ್ಕೇರಿ, ವಿಶ್ವನಾಥ ಕಡಕೋಳ, ಸುರೇಶ ಜಾಧವ, ವಿಠ್ಠಲ ಮೇಳವಂಕಿ ಇತರರಿದ್ದರು.