ಭಾನುಪ್ರಕಾಶ್ ಶರ್ಮಾಗೆ ಬೆಂಬಲ ಕೊಡಿ: ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ ಮನವಿ

District Brahmin Sabha press conference Mandya
Published on

ಮಂಡ್ಯ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಚುನಾವಣೆ ಏಪ್ರಿಲ್ನಲ್ಲಿ ನಡೆಯಲಿದೆ. ಈ ಹುದ್ದೆಗೆ ಸ್ಪರ್ಧೆ ಮಾಡಿರುವ ಶ್ರೀರಂಗಪಟ್ಟಣ ಶಾಶ್ವತಿ ಧರ್ಮ ಸಭಾದ ಡಾ.ಭಾನುಪ್ರಕಾಶ್ ಶರ್ಮ ಅವರನ್ನು ವಿಪ್ರ ಬಂಧುಗಳು ಬೆಂಬಲಿಸುವಂತೆ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ ಮನವಿ ಮಾಡಿದರು.

ಹಾಲಿ ಅಧ್ಯಕ್ಷ ಅಶೋಕ್ ಹಾರ್ನಳ್ಳಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಮತ್ತೆ ಅವರೇ ಸ್ಪರ್ಧೆ ಮಾಡುವಂತೆ ರಾಜ್ಯದ ವಿಪ್ರ ಬಾಂಧವರು ಒತ್ತಾಯ ಮಾಡುತ್ತಿದ್ದರೂ, ಅವರು ಸ್ಪರ್ಧೆ ಮಾಡಲು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಅಶೋಕ್ ಹಾರ್ನಳ್ಳಿ ಅವರ ಒಡನಾಡಿಯಾಗಿ ಚಾಮರಾಜನಗರದಿಂದ ಬಳ್ಳಾರಿವರೆಗೂ ಸಂಚರಿಸಿರಿ ಖ್ಯಾತರಾಗಿರುವ ಭಾನುಪ್ರಕಾಶ್ ಶರ್ಮ ಅವರ ಸ್ಪರ್ಧೆಗೆ ಅಶೋಕ್ ಅವರು ಒಪ್ಪಿಗೆ ಸೂಚಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯದರ್ಶಿ ಗೋಪಾಲಕೃಷ್ಣ ಶಣೈ, ಉಪಾಧ್ಯಕ್ಷ ಮಧುಸೂಧನ್, ಮಾಜಿ ಅಧ್ಯಕ್ಷ ಎಸ್.ಶಂಕರನಾರಾಯಣ ಶಾಸ್ತ್ರಿ, ವಿಜಯಲಕ್ಷ್ಮೀ, ಪ್ರಸನ್ನ, ಉಪಾದೇವಿ, ಶ್ರೀಧರ್, ಶ್ರೀಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net