ಜ. 9ರಂದು ಜಿಲ್ಲೆ ಬಂದ್​ಗೆ ಕರೆ

7 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂವಿಧಾನಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ ಅಭಿಮಾನಿಗಳ ಒಕ್ಕೂಟದಿಂದ ಜ. 9ರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಜಿಲ್ಲೆಯನ್ನು ಸಂರ್ಪೂಣ ಬಂದ್​ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯ ಎಂ. ಅರವಿಂದ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ ಸಮಸ್ತ ದೇಶದ ಜನತೆಗೆ ದೇವರೇ ಆಗಿದ್ದಾರೆ. ಅಂದು ಅವರು ಸಂವಿಧಾನ ರಚಿಸದಿದ್ದರೆ, ಇಂದು ಅಮಿತ ಷಾ ಇಷ್ಟೊಂದು ಉನ್ನತ ಸ್ಥಾನಕ್ಕೆ ಏರುತ್ತಿರಲಿಲ್ಲ. ಆದರೆ ಅವರಿಂದ ಎಲ್ಲ ಸೌಲಭ್ಯ ಪಡೆದು ಈಗ ಅವರ ಬಗೆಗೆ ಇಷ್ಟೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಅಂದು ಬಂದ್​ಗೆ ಬೆಂಬಲ ನೀಡುವಂತೆ ಎಲ್ಲ ಸಂಘ-ಸಂಸ್ಥೆಗಳಿಗೆ, ವ್ಯಾಪಾರಸ್ಥರಿಗೆ, ಹೊಟೇಲ್​ ಉದ್ಯಮಿಗಳಿಗೆ ಮನವಿ ಮಾಡಲಾಗಿದೆ. ಬೆಳಗ್ಗೆಯಿಂದ ಶಾಂತಿಯುತವಾಗಿ ಹೋರಾಟ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಲಾಗುವುದು ಎಂದರು.

ಮುಖಂಡ ಅಶೋಕ ಭಂಡಾರಿ, ಲಕ್ಷ್ಮಣ ಬಕ್ಕಾಯಿ, ಪರಮೇಶ್ವರ ಕಾಳೆ, ಯಲ್ಲಪ್ಪ ಮಂಟೂರ, ಲಕ್ಷ್ಮಣ ದೊಡ್ಡಮನಿ, ರಮೇಶ ದೊಡವಾಡ, ತುಳಸಪ್ಪ ಪೂಜಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net