ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಅಂಬೇಡ್ಕರ್ ಭವನದಲ್ಲಿ ಅಳವಡಿಸಿರುವ ಹವಾ ನಿಯಂತ್ರಣ ಯಂತ್ರ ದುರಸ್ಥಿಯಲ್ಲಿದ್ದು, ಇದರ ಬಗ್ಗೆ ಗಮನಹರಿಸಬೇಕು. ವಿದ್ಯುತ್ ಶುಲ್ಕವು ತುಂಬಾ ದುಬಾರಿಯಾಗಿದ್ದು, ಇದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸೋಲಾರ್ ಪ್ಲಾಂಟ್ ಗಳನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ಭವನದ ಮುಂದುವರಿದ ಕಾಮಗಾರಿಗಾಗಿ ಬಿಡುಗಡೆಗೊಂಡಿರುವ ಅನುದಾನದಲ್ಲಿ ಕೈಗೊಳ್ಳಬಹುದು ಎಂದರು.