ಸ್ಕ್ಯಾನಿಂಗ್ ದಾಖಲೆ ಪರಿಶೀಲನೆ ನಡೆಸಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸೂಚನೆ

District Advisory Committee Meeting mandya
Published on

ಮಂಡ್ಯ: ಮೂರು ತಿಂಗಳ ಮೇಲ್ಪಟ್ಟು ಹಾಗೂ 6 ತಿಂಗಳವರೆಗಿನ ಗಭೀರ್ಣಿಯರು ಸ್ಕ್ಯಾನಿಂಗ್ ಒಳಪಟ್ಟಿರುವವರ ದಾಖಲೆಗಳನ್ನು ತಪಾಸಣಾ ತಂಡ ಆದ್ಯತೆಯ ಮೇಲೆ ಪರಿಶೀಲಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಸೂಚಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಜಿಲ್ಲಾ ಸಲಹ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ತಪಾಸಣಾ ತಂಡ ಜಿಲ್ಲೆಯಲ್ಲಿ ಸ್ಕಾೃನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕಾಯ್ದೆಯಲ್ಲಿ ತಿಳಿಸಿರುವ ರೀತಿ ಸ್ಕ್ಯಾನಿಂಗ್ ಸೆಂಟರ್‌ಗಳು ದಾಖಲೆಗಳನ್ನು ಕನಿಷ್ಟ ಎರಡು ವರ್ಷ ಸಂಗ್ರಹಿಸಿಡಬೇಕು ಎಂದರು.

ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಕುರಿತು ಮಾಹಿತಿ ಫಲಕವನ್ನು ಸಾರ್ವಜನಿಕರಿಗೆ ಗೋಚರಿಸುವಂತೆ ಹಾಕುವಂತೆ ಸೂಚನೆ ನೀಡಬೇಕು. ಪ್ರಮುಖವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣಗಳು ನೀಡಿ ನೇರವಾಗಿ ಮೂರು ಅಥವಾ ನಾಲ್ಕು ತಿಂಗಳ ನಂತರ ಗಭೀರ್ಣಿಯರು ವೈದ್ಯರ ಬಳಿ ತಪಾಸಣೆಗೆ ಒಳಪಡುವವರ ಬಗ್ಗೆ ಮಾಹಿತಿ ನೀಡಿದರೆ ವಿಶೇಷ ನಿಗಾ ವಹಿಸಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಮಿಮ್ಸ್‌ನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಮನೋಹರ್, ವಿನಾಯಕ ನರ್ಸಿಂಗ್ ಹೋಂನ ಡಾ.ವಸುಮತಿರಾವ್, ಮಕ್ಕಳ ತಜ್ಞ ಡಾ.ಗೋಪಾಲಕೃಷ್ಣ ಗುಪ್ತ, ರೆಡಿಯೋಲಾಜಿಸ್ಟ್ ಡಾ.ನಿತೇಶ್ ಶ್ರೀನಿವಾಸ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜನಶಕ್ತಿ ಸಂಘಟನೆಯ ಪೂರ್ಣಿಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net