ಗ್ರಾಹಕರಿಗೆ ಗುಣಮಟ್ಟದ ಆಹಾರ ಪೂರೈಕೆಗೆ ಜಿಲ್ಲಾಡಳಿತ ಸೂಚನೆ

IMG-20250519-WA0114.jpg
Published on

ಚಿಕ್ಕಬಳ್ಳಾಪುರ: ಜನರ ಆರೋಗ್ಯದ ಹಿತದೃಷ್ಟಿಯಿಂದ ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆ ಹಾಗೂ ಮಾರಾಟದ ವಹಿವಾಟಿಗೆ ಮಾತ್ರ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೂಚಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಹಾರ ಉದ್ಧಿಮೆದಾರರನ್ನು ಒಂದೇ ಸೂರಿನಡಿಯಲ್ಲಿ ಪರಿವೀಕ್ಷಣೆ ಹಾಗೂ ನಿಬಂಧನೆಗೆ ಒಳಪಡಿಸಿ ಮಾನವನ ಸೇವನೆಗೆ ಯೋಗ್ಯವಾದ ಆಹಾರವನ್ನು ಜಿಲ್ಲೆಯಲ್ಲಿ ಪೂರೈಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಿಳಿಸಿದರು.
ಎಲ್ಲಾ ರೀತಿಯ ಆಹಾರ ಪದಾರ್ಥಗಳ ತಯಾರಕರು, ರೀ ಪ್ಯಾಕರ್ಗಳು, ಸಂಸ್ಕರಣೆ, ಸಾಗಣಿದಾರರು, ಆಮದುದಾರರು, ವಿತರಕರು, ಸಗಟು ಮಾರಾಟಗಾರರು, ಸಂಗ್ರಹ ಶೀತಲ ಕೇಂದ್ರ, ಹಾಲಿನ ಡೈರಿಗಳು, ಹಾಲಿನ ಉದ್ಧಿಮೆದಾರರು, ತಂಪು ಪಾನೀಯ ತಯಾರಿಕಾ ಘಟಕಗಳು, ವೈನ್ ಸ್ಟೋರ್, ಕ್ಲಬ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು ಹಾಗೂ ರೆಸಾರ್ಟ್ ಗಳು, ಧಾರ್ಮಿಕ ಸ್ಥಳದಲ್ಲಿ ಊಟ ವ್ಯವಸ್ಥೆಯ ಸಂಯೋಜಕರು, ಕೋಳಿ, ಮೀನು, ಮಾಂಸ ಮಾರಾಟಗಾರರು ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಜಿ.ಪಂ.ಉಪ ಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ. ಪ್ರಕಾಶ್ ಮತ್ತಿತರರು ಇದ್ದರು.

*ತರಬೇತಿ, ನೋಂದಣಿ
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿನ ಅಡುಗೆ ತಯಾರಕರಿಗೆ ಎ್ಎಸ್ಎಸ್ಎ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕು. ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಣ್ಣು ಮತ್ತು ತರಕಾರಿ ಮಳಿಗೆಗಳು ಎ್ಎಸ್ಎಸ್ಎ ನೋಂದಣಿ ಹಾಗೂ ಪರವಾನಗಿ ಪರಿಶೀಲನೆಯ ಬಗ್ಗೆ ಚರ್ಚಿಸಲಾಯಿತು.

*ದಂಡ, ಜೈಲು ಶಿಕ್ಷೆ
ವಾರ್ಷಿಕ 12 ಲಕ್ಷ ರೂ ಒಳಗೆ ಆಹಾರ ಉದ್ಧಿಮೆದಾರರು ಎಎಸ್ಎಸ್ಎ ನೋಂದಣಿ ಹಾಗೂ 12 ಲಕ್ಷ ಮೇಲ್ಪಟ್ಟು ಉದ್ದಿಮೆದಾರರು ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು. ತಪ್ಪಿದಲ್ಲಿ 10 ಲಕ್ಷ ರೂಗಳವರೆಗೆ ದಂಡ ಹಾಗೂ ಜೈಲು ಸಜೆಯನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net