ಜಿಲ್ಲಾಡಳಿತದಿಂದ ಕೊರಗ ಕುಟುಂಬಕ್ಕೆ ಅನ್ಯಾಯ

santvana
ಕೊಲ್ಲೂರಿನಲ್ಲಿ ಕೊರಗ ಕುಟುಂಬದ ಮನೆ ನೆಲಸಮಗೊಳಿಸಿದ ಸ್ಥಳಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
Published on

ಬೈಂದೂರು: ಕೊಲ್ಲೂರಿನಲ್ಲಿ ವಾಸಿಸುತ್ತಿದ್ದ ಕೊರಗ ಸಮುದಾಯದ ಕುಟುಂಬದ ಮನೆಯನ್ನು ಕೋರ್ಟ್ ಆದೇಶ ನೆಪದಲ್ಲಿ ಅಧಿಕಾರಿಗಳು ಏಕಾಏಕಿ ನೆಲಸಮ ಮಾಡಿರುವುದು ಹೇಯಕೃತ್ಯ. ಜಿಲ್ಲಾಡಳಿತದ ಹಾಗೂ ಪೊಲೀಸರ ಈ ನಡೆ ಖಂಡನೀಯ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಸಮಾಧಾನ ವ್ಯಕ್ತಪಡಿಸಿದರು.

ಕೊರಗ ಕುಟುಂಬ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಪ್ರದೇಶವು ವಿವಾದಿತ ಸ್ಥಳ ಎಂದೇ ಬಿಂಬಿತವಾಗಿದ್ದು, ಪೊಲೀಸರ ನೆರವಿನಲ್ಲಿ ಜಿಲ್ಲಾಡಳಿತ ಏಕಾಏಕಿ ಕುಟುಂಬಕ್ಕೆ ತೊಂದರೆ ನೀಡಿದೆ. ಸಿಗಬೇಕಿದ್ದ ಸೌಲಭ್ಯಗಳಿಂದ ಈ ಕುಟುಂಬ ವಂಚಿತವಾಗಿದ್ದು, ಜಿಲ್ಲಾಡಳಿತ ಈ ಕುರಿತು ಮುತುವರ್ಜಿ ವಹಿಸಿಲ್ಲ ಎಂದು ಆರೋಪಿಸಿದರು.

ನೊಂದ ಕುಟುಂಬಕ್ಕೆ ಮೂರು ದಿನಗಳ ಒಳಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು. ಸೂಕ್ತ ಜಾಗ ಮಂಜೂರುಗೊಳಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕೊರಗ ಕುಟುಂಬದೊಂದಿಗೆ ಜಿಲ್ಲಾಡಳಿತ ಕಚೇರಿ ಮುಂಭಾದಲ್ಲಿ ಧರಣಿ ನಡೆಸಲಾಗುವುದು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net