

ರಾಯಚೂರು ಮಹತ್ವದ ಸನಾತನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರೀ ಶಂಕರಾಚಾರ್ಯರ ಕೊಡುಗೆಯು ಅಪಾರವಾಗಿದೆ ಎಂದು ಉಪನ್ಯಾಸಕ ದತ್ತಾತ್ರೇಯ ಪಂ.ಜೋಷಿ ಅವರು ಹೇಳಿದರು.
ಜಿ¯್ಲÁಡಳಿತ, ಜಿ¯್ಲÁ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಶಂಕರಾಚಾರ್ಯರು ಬಾಲ್ಯದಿಂದಲೇ ಅದ್ಯಾತ್ತದತ್ತ ಒಲವು ಹರಿಸಿದರು. ಶ್ರೀ ಶಂಕರಾಚಾರ್ಯರ ಜÁತಕದ ಬಗ್ಗೆ ಪಂಡಿತರು ವಿಶೇಷ ಇದೆ ಎಂದು ತಿಳಿಸುತ್ತಿದ್ದರು. ಅಪಾರ ವಿದ್ಯೆಯನ್ನು ಹೊಂದುತ್ತಾರೆ. ವೇದಶಾಸöಗಳಲ್ಲಿ ಸಂಪೂರ್ಣ ಪಾಂಡಿತ್ಯ ಪಡೆಯುತ್ತಾರೆ ಎಂದು ಪಂಡಿತರು ಹೇಳುತ್ತಿದ್ದರು. ಶ್ರೀ ಶಂಕರಾಚಾರ್ಯರು ಅಂದರಅತೆ ಸಾಧನೆ ಮಾಡಿದರು ಎಂದು ತಿಳಿಸಿದರು.
ಮನಸ್ಸೇ ಮನುಷ್ಯನ ಸಾಧನೆ- ಸಂಕಟಗಳಿಗೆ ಕಾರಣ ಎಂದು ಹೇಳುತ್ತಿದ್ದ ಶಂಕರಾಚಾರ್ಯರು ಗಂಗಾ ನದಿ ತೀರದಲ್ಲಿ ಗುರುಪಾದದಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. ಶ್ರೀ ಶಂಕರಾಚಾರ್ಯರು ಸನಾತನ ಧರ್ಮದ ಪ್ರಥಮ ಆಧುನಿಕ ರಕ್ಷಕರಾಗಿ ಪರಿಗಣಿಸಲ್ಪಡುತ್ತಾರೆ. ಶ್ರೀ ಶಂಕರಾಚಾರ್ಯರು ಕೇವಲ ಒಂದು ಜÁತಿಗೆ ಮಾತ್ರ ಸೀಮಿತವಾಗದೇ, ಸನಾತನ ಧರ್ಮವನ್ನು ಉಳಿಸಿದ ಮಹಾನï ಚೇತನರಾಗಿz್ದÁರೆಂದರು.
ಚಲನಚಿತ್ರ ನಿರ್ಮಾಪಕ ತ್ರಿವಿಕ್ರಮ ಜೋಷಿ ಅವರು ಮಾತನಾಡಿ, ವೇದಗಳು, ಉಪನಿಷತ್ತುಗಳು ಮತ್ತು ಧರ್ಮಶಾಸöಗಳಂತಹ ಪವಿತ್ರ ಗ್ರಂಥಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ ರಾಷ್ಟçವನ್ನು ರೂಪಿಸಬೇಕು ಎಂಬುದು ಆದಿ ಶಂಕರಾಚಾರ್ಯರ ವಿಚಾರವಾಗಿತ್ತು. ತಾತ್ವಿಕ ಚಿಂತನೆಗಳನ್ನು ಕೇವಲ ಪಾಠದಲ್ಲಷ್ಟೇ ಅಲ್ಲ ಪ್ರಾಯೋಗಿಕವಾಗಿ ಜÁರಿ ಮಾಡಬೇಕು ಎಂದು ಅವರು ರಾಷ್ಟಿçÃಯ ಕಲ್ಪನೆಯೊಂದನ್ನು ರೂಪಿಸಿದರು. ಇದು ಆ ಕಾಲದ ಅತ್ಯಂತ ಮಹತ್ವದ ದಾರ್ಶನಿಕ ಕ್ರಾಂತಿ ಎಂದೆನಿಸಬಹುದಾಗಿದೆ ಎಂದರು.
ಕಾರ್ಯಕ್ರಮದ ಮೊದಲು ಶ್ರೀ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರರಾದ ಸುರೇಶ ವರ್ಮಾ ಅವರು ಚಾಲನೆ ನೀಡಿದರು. ಡಾ.ಬಿ.ಆರï.ಅಂಬೇಡ್ಕರï ವೃತ್ತದಿಂದ ಸಾಗಿದ ಮೆರವಣಿಗೆಯು ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ರಂಗಮಅದಿರಕ್ಕೆ ಬಂದು ಸೇರಿತು.
ಈ ಸಂದರ್ಭದಲ್ಲಿ ಗ್ರೇಡ್ -೨ ತಹಸೀಲ್ದಾರ ಪರಶುರಾಮ, ಪತ್ರಕರ್ತ ಅರವಿಂದ ಕುಲಕರ್ಣಿ, ಸಂಘಟಿಕರಾದ ಡಾ.ದತ್ತಪ್ಪ ಬಿರಾದಾರ, ಆನಂದ ಬಡ್ಡಿ, ಹನುಮಂತ್ ರಾವï, ರಮೇಶ್ ಕುಲಕರ್ಣಿ, ಕೃಷ್ಣಮೂರ್ತಿ, ಪಿ ಕೆ ದೇಸಾಯಿ, ಡಾ.ಆನಂದ ಪಡ್ನವೀಸ್ ಸೇರಿ ಅನೇಕರು ಇದ್ದರು.