

ರಾಯಚೂರು ಭಗವಾನ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು, ಈ ಆಧುನೀಕತೆಯಲ್ಲಿ ನಾವೆಲ್ಲ ಮಹಾವೀರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅಹಿಂಸೆ ಮಾರ್ಗದಲ್ಲಿ ನಡೆಯಬೇಕಾಗಿದೆಂದು ತಹಶೀಲ್ದಾರ್ ಸುರೇಶ ವರ್ಮ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರದಲ್ಲಿ ಜಿ¯್ಲÁಡಳಿತ, ಜಿ¯್ಲÁ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಗವಾನ್ ಮಹಾವೀರ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು. ಜೈನ ಧರ್ಮೀಯರು ಶಾಂತಿ ಪ್ರಿಯರು ಮತ್ತು ಅಹಿಂಸಾ ವಾದಿಗಳು. ಅವರ ನಡೆ-ನುಡಿ ಸಮಾಜಕ್ಕೆ ಮಾದರಿಯಾಗಿದೆ. ಆಧುನೀಕತೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಮುಂದುವರಿಸಿಕೊAಡು ಹೋಗಬೇಕಾಗಿದೆ. ಹೀಗಾಗಿ ಮಹಾವೀರರ ತತ್ವಾದರ್ಶಗಳನ್ನು ನಾವೆಲ್ಲ ಪಾಲಿಸಬೇಕಾಗಿದೆ ಎಂದರು.
ವೇದಿಕೆ ಕಾರ್ಯಕ್ರಮದ ಮೊದಲು ನಗರದ ಭಗವಾನ್ ಮಹಾವೀರ ಸರ್ಕಲï ಹತ್ತಿರ ಮಹಾವೀರ ಪುತ್ಥಳಿಗೆ ನಗರ ಶಾಸಕ ಡಾ.ಶಿವರಾಜ ಎಸï. ಪಾಟೀಲï, ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಜಿ¯್ಲÁಽಕಾರಿ ನಿತೀಶï ಕೆ., ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ,ಉಪನ್ಯಾಸಕರಾಗಿಪ್ರೇಮಲತಾ,ಅಶೋಕ್ ಕುಮಾರ ನಾಯಕ,ದಂಡಪ್ಪ ಬಿರಾದರ.ವಿಜಯರಾಜ ಮೋಥ ಸೇರಿ ಅನೇಕರು ಇದ್ದರು.