

ರಾಯಚೂರು ರೇಣುಕಾಚಾರ್ಯರ ಜೀವನ ತತ್ವ, ಸಿದ್ಧಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಯಚೂರು ಗ್ರೇಡ್-೨ ತಹಶೀಲ್ದಾರ್ ಭೀಮರಾಯ ಅವರು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿ¯್ಲÁಡಳಿತ, ಜಿ¯್ಲÁ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ರೇಣುಕಾಚಾರ್ಯರು ಸಾರಿz್ದÁರೆ. ಭಾರತದ ಪುಣ್ಶಭೂಮಿಯಲ್ಲಿ ಹಲವಾರು ಧರ್ಮಗಳು ಜನ್ಮ ಪಡೆದು ಮಾನವರ ಐಹಿಕ ಉದ್ಧಾರಕ್ಕೆ ಮತ್ತು ಅಲೌಕಿಕ ಪ್ರಾಪ್ತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ ಎಂದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ರೇಣುಕಾಚಾರ್ಯರು ಕೇವಲ ವೀರಶೈವ ಸಮಾಜಕ್ಕೆ ಮಾತ್ರ ಸೀಮಿತವಾದ ವರಲ್ಲ. ಇಡೀ ಮನುಕುಲಕ್ಕೆ ಸನ್ಮಾರ್ಗವನ್ನು ನೀಡಿದವರಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಗದ್ಗುರು ರೇಣುಕಾಚಾರ್ಯರು, ಕಲಿಯುಗದಲ್ಲಿ ಮಾತ್ರವಲ್ಲದೆ ಕೃತಾ ಯುಗ, ತ್ರೇತಾ ಯುಗ, ದ್ವಾಪರ ಯುಗದಲ್ಲಿ ಜನಸಿ, ನಂತರ ಕಲಿಯುಗದಲ್ಲಿ ಜನಸಿದ ಮಹಾತ್ಮರಾಗಿದ್ದಾರೆ. ಕಲಿಯುಗದಲ್ಲಿ ಜನಿಸಿ ರೇಣುಕಾಚಾರ್ಯರು ಕೇವಲ ವೀರಶೈವ ಸಮಾಜವನ್ನಷ್ಟೆ ಸ್ಥಾಪನೆ ಮಾಡಿಲ್ಲ.
ಇಡೀ ಮನುಕುಲದ ಉಳಿತಿಗಾಗಿ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಇದಷ್ಟೆ ಅಲ್ಲದೇ ಶಿವಯೋಗದ ಸಾಮ್ರಾಜ್ಯವನ್ನು ಕಾಪಾಡುವಲ್ಲಿಯೂ ಜಗದ್ಗುರು ರೇಣುಕಾಚಾರ್ಯರ ಪಾತ್ರ ಅತ್ಯಂತ ಪ್ರಮುಖವಾದದ್ದು, ಶಿವಯೋಗ ಎಂಬ ಪದದ ಮೊದಲ ಉತ್ಪತ್ತಿ ರೇಣುಕಾಚಾರ್ಯರಿಂದಲೆ ಆಗಿದೆ. ಶಿವನನ್ನು ಬಿಟ್ಟು ಇರದ ಹಾಗೂ ಶಿವನನ್ನು ಅತ್ಯಂತ ಹೆಚ್ಚಾಗಿ ಪ್ರೀತಿಸುವವರು ವೀರಸೈವರಾಗಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಜಿ¯್ಲೆಯ ಸಿಂಧನೂರು ತಾಲೂಕಿನ ಗಿಣಿವರ ಗ್ರಾಮದ ಶ್ರೀ ಶಿವಾಚಾರ್ಯ ಶಾಸ್ತಿಗಳು ಹಿರೇಮಠ ಅವರು ಮಾತನಾಡಿ, ದ್ವಾಪರಯುಗದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರಾಗಿ ಕಲಿಯುಗದಲ್ಲಿ ಶ್ರೀಜಗದ್ಗುರು ರೇವಣಸಿದ್ಧರಾಗಿ ಅವತರಿಸಿ ವೀರಶೈವ ಧರ್ಮ ಸಂಸ್ಥಾಪಕರಾಗಿ ಯುಗ ಪ್ರವರ್ತಕರಾಗಿ ಧರ್ಮ ಸಂರಕ್ಷಣೆಗಾಗಿ ಜಗದಲ್ಲಿ ಶಿವe್ಞÁನದ ಬೆಳಕನ್ನು ಬೀರಿದರು. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ನಗರ ಮಂಗಳವಾರಪೇಟೆ ಹಿರೆಮಠದಿಂದ ಬೈಪಾಸ್ ವರೆಗೆ ಮೆರವಣಿಗೆ ತೆರಳಿ,
ನಂತರ ಬೈಪಾಸ್ ರಸ್ತೆಯ ಜಗದ್ಗುರು ರೇಣುಕಾಚಾರ್ಯ ವೃತ್ತದಿಂದ ವೀರಶೈವ ಕಲ್ಯಾಣ ಮಂಟಪದ ವರೆಗೆ ಬೈಕ್ರ‍್ಯಾಲಿ ಮೂಲಕ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಹಿರೆಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶರಣಭೂಪಾಲ ನಾಡಗೌಡ, ಕಲ್ಲಯ್ಯ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್ ಸೇರಿದಂತೆ ಅನೇಕರು ಇದ್ದರು.