

ಮಡಿಕೇರಿ
ಮಳೆಯ ಕೊರತೆ ಕಾರಣದಿಂದ ನದಿಗಳಲ್ಲಿ ನೀರಿನ ಹರಿವು ಕಡಿಮೆ ಆಗಿದೆ. ಪಂಪ್‌ಸೆಟ್ ಬಳಸಿ ನದಿಗಳಿಂದ ಅನಧಿಕೃತವಾಗಿ ನೀರೆತ್ತುವುದು ಕೂಡ ನದಿ ಬತ್ತುವಿಕೆಗೆ ಮತ್ತೊಂದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನದಿಗಳಿಂದ ಅನಧಿಕೃತವಾಗಿ ನೀರೆತ್ತುವುದನ್ನು ನಿ?ೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ ಮುಂದಿನ ಆದೇಶದವರೆಗೆ ಕೊಡಗು ಜಿಲ್ಲೆಯಾದ್ಯಂತ ಇರುವ ನದಿ ಮತ್ತು ನದಿ ಮೂಲಗಳಿಂದ ಅಕ್ರಮ ಅಥವಾ ಅನಧಿಕೃತವಾಗಿ ಖಾಸಗಿ ಚಟುವಟಿಕೆಗಳಿಗೆ ಪಂಪ್‌ಸೆಟ್ ಬಳಸಿ ಅಥವಾ ಕಾಲುವೆಗಳ ಮುಖಾಂತರ ನದಿ ನೀರನ್ನು ಇತರೆ ಉದ್ದೇಶಕ್ಕೆ ಬಳಸುವುದನ್ನು ಸಂಪೂರ್ಣವಾಗಿ ನಿ?ೇಧಿಸಿ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಉಲ್ಲಂಘನೆ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆ ೨೦೦೫ರ ಸೆಕ್ಷನ್ ೫೧ ಬಿ ಅಡಿ ದಂಡನೀಯವಾಗಿದೆ ಎಂದು ಕೂಡ ವೆಂಕಟ್ ರಾಜಾ ತಿಳಿಸಿದ್ದಾರೆ.
ಆದರೆ ಈ ಆದೇಶ ಕೃಷಿಕರ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವುದರಿಂದ ಜಿಲ್ಲಾಧಿಕಾರಿ ಅವರ ಈ ಆದೇಶಕ್ಕೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಮಳೆ ಇಲ್ಲದೆ ಫಸಲು ಉಳಿಸಿಕೊಳ್ಳಲು ಕೃಷಿಕರು ಕಷ್ಟ ಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನದಿ ನೀರು ಬಳಸದಂತೆ ನಿರ್ಬಂಧಿಸಿರುವುದು ಎಷ್ಟು ಸರಿ? ಎನ್ನುವುದು ಕೃಷಿಕರ ಪ್ರಶ್ನೆ. ಮಳೆಗಾಲದಲ್ಲಿ ಮಳೆ ಕೊರತೆ ಉಂಟಾಗಿತ್ತು. ಹಾಗಾಗಿ ಬೇಸಿಗೆ ಆರಂಭಕ್ಕೆ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದು ಬಿಟ್ಟು ಈಗ ಸಂಕಷ್ಟದ ಸಮಯದಲ್ಲಿ ಇಂಥ ಆದೇಶ ಮಾಡಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ಕುಡಿಯುವ ನೀರಿನ ಮೂಲಗಳನ್ನು ಕಾಪಾಡಿಕೊಳ್ಳುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ಕಾಫಿ, ಕಾಳು ಮೆಣಸು, ಭತ್ತ ಕೊಡಗಿನ ರೈತರ ಜೀವಾಳವಾಗಿದೆ. ಈ ಫಸಲು ಕೈಸೇರದಿದ್ದರೆ ಜೀವನ ನಿರ್ವಹಣೆ ಬಹಳ ಕಷ್ಟವಾಗುತ್ತದೆ. ಮಾರ್ಚ್ ತಿಂಗಳಲ್ಲಿ ಕಾಫಿ ತೋಟಕ್ಕೆ ಅಗತ್ಯವಾಗಿ ನೀರು ಬೇಕಾಗಿದೆ. ನೀರಿರುವ, ನದಿ ಹೊಳೆಗಳಲ್ಲಿ ಕೃಷಿ ಉಪಯೋಗಕ್ಕೆ ನೀರು ಬಳಕೆಗೆ ಅನುವು ಮಾಡಿಕೊಡಬೇಕು. ಮಾನವೀಯ ದೃಷ್ಟಿಯಿಂದ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು.
- ಎ.ಆರ್. ಕುಶಾಲಪ್ಪ, ಕೃಷಿಕ, ಯಡೂರು ಗ್ರಾಮ
ಕಳೆದ ಕೆಲವು ವ?ರ್ಗಳಿಂದ ಬೇಸಿಗೆಯ ಕಾವು ಹೆಚ್ಚಾಗ ತೊಡಗಿದೆ. ಕೆರೆ ಬಾವಿಗಳು ಆರಿ ಕುಡಿಯಲೂ ನೀರಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗತೊಡಗಿದೆ. ರೈತರೂ ಫಸಲು ಉಳಿಸಲು ಕ?್ಟ ಪಡುತ್ತಿದ್ದಾರೆ. ಏಕಾಏಕಿ ನೀರನ್ನು ಬಳಸಬಾರದು ಎಂದರೆ ರೈತರ ಗತಿ ಏನು. ಕೈಗೆ ಬಂದ ಫಸಲು ಬಾಯಿಗೆ ಬಾರದೇ ಹೋದರೆ, ಆಗುವ ನ?್ಟಕ್ಕೆ ಹೊಣೆ ಯಾರು ? ಮುಂದಿನ ವ?ರ್ದ ರೈತರ ಜೀವನ ಸಾಗುವುದು ಹೇಗೆ? ಎಲ್ಲರಿಗೂ ನೀರಿನ ಮೇಲೆ ಸಮಾನ ಹಕ್ಕು ಇದೆ.
ಚಂಗುಲಂಡ ಸತೀಶ್, ಕೃಷಿಕ, ಟಿ. ಶೆಟ್ಟಿಗೇರಿ
ಬೆಂಕಿ ಬಿದ್ದ ಮೇಲೆ ಬಾವಿ ತೋಡುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡಿದ್ದರೆ ಒಳ್ಳೆಯದಿತ್ತು. ಈ ಬಾರಿ ಬಿರುಸು ಬೇಸಿಗೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದರೂ ಈಗ ನೀರು ಆರಿದ ಮೇಲೆ ರೈತರಿಗೆ ತೊಂದರೆ ನೀಡುವುದು ಸರಿಯಲ್ಲ. ಬೇಸಿಗೆಗೆ ಮೊದಲೇ ಸರಿಯಾದ ವ್ಯವಸ್ಥೆ ಮಾಡಿಕೊಂಡಿದ್ದರೆ ಹೆಚ್ಚಿನ ಸಮಸ್ಯೆ ಇರುತ್ತಿರಲಿಲ್ಲ. ಈಗ ಇಂತಹ ನಿರ್ಬಂಧ ಹೇರುವುದರಿಂದ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ಅನಿತಾ ಬಿ.ಯು, ಗ್ರಾ.ಪಂ. ಸದಸ್ಯೆ, ಟಿ.ಶೆಟ್ಟಿಗೇರಿ
ಕೃಷಿಗೆ ನದಿ ನೀರಿನ ಮಿತವಾದ ಬಳಕೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನದಿ ನೀರನ್ನು ಆಶ್ರಯಿಸಿ ನಾವು ಶ್ರಮ ಪಟ್ಟು ಬೆಳೆಸಿರುವ ತರಕಾರಿ ಗಿಡ, ಬಳ್ಳಿಗಳು ಒಣಗಿ ನೀರಿನ ಮೇಲೆ ಹೋಮ ಮಾಡಿದಂತಾಗುತ್ತದೆ. ಫಸಲು ಆರಂಭವಾಗುತ್ತಿರುವ ಈ ಸಮಯ ಗಿಡಗಳಿಗೆ ನೀರು ಅತ್ಯಾವಶ್ಯಕವಾದ ಕಾರಣ ಸರ್ಕಾರ ನದಿ ನೀರಿನ ಬಳಕೆಗೆ ಅವಕಾಶ ನೀಡಬೇಕು
ಸತ್ಯಭಾಮ ಬಿ.ಬಿ., ವಿರಾಜಪೇಟೆ
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ನೀರಿಲ್ಲದೆ ಮನು?್ಯ ಬದುಕಲು ಸಾಧ್ಯವಿಲ್ಲ. ಅದೇ ರೀತಿ ರೈತರು ಬೆಳೆಯುವ ಬೆಳೆಗಳಿಗೆ ನೀರುಣಿಸದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳು ಸಿಗುವುದು ಕ?್ಟವಾಗುತ್ತದೆ. ಇದು ಎಂತಹ ಪರಿಸ್ಥಿತಿ ಎಂದರೆ ಎರಡು ಕಣ್ಣುಗಳಲ್ಲಿ ಯಾವುದು ಮುಖ್ಯ ಎನ್ನುವಂತೆ ಆಗಿದೆ. ಏನೇ ಆಗಲಿ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಪ್ರಾಮುಖ್ಯತೆ ಕೊಡಬೇಕು.
ಪ್ರಶಾಂತ್ ಡಿಸೋಜ, ಛಾಯಾಗ್ರಾಹಕ, ಕುಶಾಲನಗರ.
ಜಿಲ್ಲೆಯಲ್ಲಿ ರೈತರು ಕೃಷಿ ಚಟುವಟಿಕೆಗೆ ನದಿ ನೀರನ್ನು ಬಳಸಬಾರದೆಂದು ಏಕಾಏಕಿ ನಿರ್ಬಂಧಿಸಿರುವುದು ಒಳ್ಳೆಯ ಕ್ರಮವಲ್ಲ. ಈ ಸಮಯದಲ್ಲಿ ಕಾಫಿಗೆ ನೀರು ಸಿಗದಿದ್ದರೆ ಬಾರಿ ನ?್ಟ ಉಂಟಾಗಲಿದೆ. ಮಳೆ ಇಲ್ಲದ ಸಮಯದಲ್ಲಿ ನೀರಿಗೆ ನಿ?ೇಧ ಹೇರಿದರೆ ಬೆಳೆಗಾರರ ಪರಿಸ್ಥಿತಿ ಸರ್ಕಾರ ಯೋಚಿಸಬೇಕಾಗಿದೆ. ಜಿಲ್ಲಾಧಿಕಾರಿ ಆದೇಶ ಮರುಪರಿಶೀಲಿಸುವುದು ಸೂಕ್ತ.
ಕುಲ್ಲಚಂಡ ರಮೇಶ್ ಕಾಳಪ್ಪ, ಕಾಫಿ ಬೆಳೆಗಾರ, ನೆಲ್ಯಹುದಿಕೇರಿ, ನಲ್ವತ್ತೇಕರೆ ಗ್ರಾಮ
ನದಿ ನೀರು ಕೃಷಿಗೆ ಬಳಕೆ ಮಾಡಬೇಡಿ ಎನ್ನುತ್ತಿರುವ ಕ್ರಮ ಸರಿಯಲ್ಲ. ರೈತರು ಕೃಷಿಯನ್ನೇ ನಂಬಿ ಬದುಕುವುದು. ಕೃಷಿಗೆ ಅನೇಕರು ನದಿ ನೀರನ್ನೆ ನಂಬಿ ಕೃಷಿ ಮಾಡುತ್ತಿದ್ದಾರೆ. ಈಗಾಗಲೇ ರೈತರು ನದಿ ನೀರು ನಂಬಿ ಕೃಷಿ ಕಾರ್ಯಕ್ಕೆ ಕೈ ಹಾಕಿದ್ದಾರೆ. ಆದರೆ ಇದೀದಿಗ ಈ ನೀರು ಬಳಸಬಾರದು ಎಂದು ನಿಬರ್ಂಧ ಹೇರಿರುವುದು ಸರಿಯಲ್ಲ. ನೀರಿನ ಪ್ರಮಾಣ ಕಡಿಮೆ ಆಗಲು ಕಾರಣ ಏನು ಎಂದು ತಜ್ಞರ ಮೂಲಕ ಅಭಿಪ್ರಾಯ ಪಡೆಯಲಿ.
ದುರ್ಗೆಶ್ ಕುಮಾರ್ ನಾಕಲಗೋಡು, ಕೃಷಿಕ.
ಹಾರಂಗಿ ಆಗಲಿ ಕಾವೇರಿಯಾಗಲಿ ಮೊದಲು ಹೂಳು ಎತ್ತುವ ಕಾರ್ಯ ಆಗಬೇಕಿದೆ. ಕಳೆದ ಸರ್ಕಾರ ಮತ್ತು ಹಾಲಿ ಸರ್ಕಾರದಲ್ಲಿ ಹೂಳೆತ್ತಲು ದೊಡ್ಡ ಮಟ್ಟದ ಅನುದಾನವನ್ನು ಬಿಡುಗಡೆ ಮಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ನಿಜವಾಗಿ ಏನು ನಡೆದಿದೆ ಎಂಬುದನ್ನು ಸಂಬಂಧಿಸಿದವರು ಹೇಳಬೇಕು. ಕೇವಲ ೩ ತಿಂಗಳು ಇಲ್ಲಿನ ಕೃಷಿಕರು ತಮ್ಮ ಕೃಷಿಗಾಗಿ ನೀರು ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ.
ಕೆ.ಪಿ. ವಸಂತಕುಮಾರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ನಾಕೂರು ಶಿರಂಗಾಲ
ಬರಗಾಲದಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಜಿಲ್ಲೆಯಲ್ಲಿ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ ಜಿಲ್ಲೆಯಾದ್ಯಂತ ಇರುವ ನದಿ ಮತ್ತು ನದಿ ಮೂಲಗಳಿಂದ ಅಕ್ರಮ ಅಥವಾ ಅನಧಿಕೃತವಾಗಿ ಖಾಸಗಿ ಚಟುವಟಿಕೆಗಳಿಗೆ ಪಂಪ್‌ಸೆಟ್ ಬಳಸಿ ಅಥವಾ ಕಾಲುವೆಗಳ ಮುಖಾಂತರ ನದಿ ನೀರನ್ನು ಇತರೆ ಉದ್ದೇಶಕ್ಕೆ ಬಳಸುವುದನ್ನು ಸಂಪೂರ್ಣವಾಗಿ ನಿ?ೇಧಿಸಲಾಗಿದೆ.ಈ ಆದೇಶದ ಉಲ್ಲಂಘನೆ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆ ೨೦೦೫ರ ಸೆಕ್ಷನ್ ೫೧ ಬಿ ಅಡಿ ದಂಡನೀಯವಾಗಿದೆ.