ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿರುತ್ಸಾಹ!

GJD-1
Published on

ಗಜೇಂದ್ರಗಡ: ಪಟ್ಟಣದಲ್ಲಿ ಜ. 19, 20 ಹಾಗೂ 21ರಂದು ನಡೆಯಲಿರುವ ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಾಹಿತ್ಯಾಭಿಮಾನಿಗಳಲ್ಲಿ ನಿರುತ್ಸಾಹ ಮೂಡಿದ್ದು ಕಂಡು ಬಂದಿತು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು 2023ರಿಂದ ದಿನಾಂಕ ಮುಂದೂಡುತ್ತ ಬಂದಿರುವುದು ಇದಕ್ಕೆ ಕಾರಣ ಎನ್ನಬಹುದು. ಈಗಾಗಲೇ ಸಮ್ಮೇಳನ ಅಧ್ಯಕ್ಷರ ಆಯ್ಕೆಯೂ ಆಗಿದ್ದು, ಅವರಿಗೆ ಆಮಂತ್ರಣವನ್ನು ನೀಡಲಾಗಿದೆ. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಗೆ ಹಿರಿಯ ಸಾಹಿತಿಗಳನ್ನು, ಕಸಾಪಕ್ಕಾಗಿ ದುಡಿದವರನ್ನು ಹಾಗೂ ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸದಿರುವುದು ಸಾಹಿತ್ಯಾಸಕ್ತರಿಗೆ ಬೇಸರ ಮೂಡಿದೆ.

ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ , ಕಸಾಪ ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಕದಳಿ ಮಹಿಳಾ ಅಧ್ಯಕ್ಷೆ ಮಂಜುಳಾ ರೇವಡಿ, ಎಚ್.ಎಸ್. ಸೋಂಪುರ, ಬಿ.ಟಿ. ಹೊಸಮನಿ, ಎಸ್.ಐ. ಪತ್ತಾರ, ಆರ್.ಜಿ. ಮ್ಯಾಕಲ್, ಹುಚ್ಚಪ್ಪ ಹಾವೇರಿ, ಬಿ.ಸಿ. ಅಂಗಡಿ, ಅರವಿಂದ ಕವಡಿಮಟ್ಟಿ, ಆರ್.ಕೆ. ಬಾಗವಾನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net