

ರೋಣ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಗುರುವಾರ ತಾಲೂಕು ಪಂಚಾಯಿತಿ, ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದರು.
ರೋಣ ಬ್ಲಾಕ್ ಕಾಂಗ್ರೆಸ್ ವೀರಣ್ಣ ಶೆಟ್ಟರ ಮಾತನಾಡಿ, ಅಧಿಕಾರಿಗಳ ಜತೆ ರೈತರು ನೇರವಾಗಿ ಸಂಪರ್ಕ ಹೊಂದಿರಬೇಕು. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದರು. ಮುಂಗಾರು ಹಂಗಾಮಿನಲ್ಲಿ ಕಡಲೆ, ಜೋಳ, ಕುಸುಬೆ, ಸೂರ್ಯಕಾಂತಿ ಸೇರಿ ವಿವಿಧ ಬೀಜಗಳನ್ನು ವಿತರಣೆ ಮಾಡಲಾಯಿತು. ಗದಗ ಕೃಷಿ ಜಂಟಿ ನಿರ್ದೇಶಕಿ ತಾರಾಮನಿ ಜಿ.ಎಚ್. ಕೃಷಿ ಇಲಾಖೆ ಸಹಾಯ ನಿರ್ದೇಶಕ ರವೀಂದ್ರಗೌಡ ಪಾಟೀಲ, ಗಿರೀಶ ಹೊಸೂರು, ಶಂಕರ್ ಕಾಗಣ್ಣವರ, ಶಿವಣ್ಣ ಅರಹುಣಸಿ, ಮುತ್ತಣ್ಣ ಸಂಗಳದ, ನಿಂಗರಾಜ ಬಾವಿ, ಬಸವರಾಜ ನವಲಗುಂದ, ಮುತ್ತಣ್ಣ ಪರಡ್ಡಿ, ಯುಸೂಫ್ ಇಟಗಿ, ಎಚ್.ಎಸ್. ಸೊಂಪುರ, ಬಿ.ಟಿ. ರಬ್ಬನಗೌಡ್ರ, ಮುತ್ತಣ್ಣ ಚೌಡರೆಡ್ಡಿ, ಮಲ್ಲಿಕಾರ್ಜುನ ಮೇಟಿ, ಇತರರಿದ್ದರು.