ಧರ್ಮಸ್ಥಳ ಸಂಘದಿಂದ ವ್ಹೀಲ್‌ಚೇರ್ ವಿತರಣೆ

29ತ್ಯಾಗರ್ತಿ2
ತ್ಯಾಗರ್ತಿ ಸಮೀಪದ ಅಡ್ಡೇರಿಯಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಗ್ಗೋಡು ವಲಯದಿಂದ ಅಂಗವಿಕಲ ಮಗುವಿಗೆ ವ್ಹೀಲ್‌ಚೇರ್ ವಿತರಿಸಲಾಯಿತು.
Published on

ತ್ಯಾಗರ್ತಿ: ಸಮೀಪದ ಅಡ್ಡೇರಿಯಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಗ್ಗೋಡು ವಲಯದಿಂದ ಅಂಗವಿಕಲ ಮಗುವಿಗೆ ವ್ಹೀಲ್‌ಚೇರ್ ವಿತರಿಸಲಾಯಿತು.

ರೇವತಿ ಮಲ್ಲೇಶಪ್ಪ ಎಂಬ ಅಂಗವಿಕಲ ಮಗುವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ವ್ಹೀಲ್‌ಚೇರ್‌ನ್ನು ತಾಲೂಕು ಯೋಜನಾಧಿಕಾರಿ ಶಾಂತಾ ನಾಯಕ್ ವಿತರಣೆ ಮಾಡಿದರು.
ವಲಯದ ಮೇಲ್ವಿಚಾರಕ ಎಸ್.ದಿನೇಶ್, ಸೇವಾ ಪ್ರತಿನಿಧಿ ಮೋಹನ್ ಒಕ್ಕೂಟದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net