ವೀಲ್ ಚೇರ್ ವಿತರಣೆ

Distribution of wheel chairs
Published on

ಮಡಿಕೇರಿ:

ನಿರಂತರ ಸಮಾಜಮುಖಿ ಕಾರ್ಯ, ಚಟುವಟಿಕೆ ಹಾಗೂ ಸೇವೆಗಳ ಮೂಲಕ ಮಾದರಿಯಾಗಿರುವ ಚೆಂಬು ಗ್ರಾಮದ ಶ್ರೀ ಭಗವಾನ್ ಸಂಘದಿಂದ ಸಂಪಾಜೆಯ ಅಶಕ್ತ ಮಹಿಳೆ ರಝಿಯಾರ ಅವರಿಗೆ ಗುರುವಾರ ಗಾಲಿ ಕುರ್ಚಿ ಕೊಡುವ ಮೂಲಕ ಅವರ ಬಾಳಿಗೆ ಹೊಸ ಚೈತನ್ಯ ತುಂಬುವ ಕೆಲಸ ಮಾಡಲಾಗಿದೆ. ಸಂಪಾಜೆ ಗೇಟ್ ಬಳಿ ನಿವಾಸಿ ಲತೀಫ್ ಎಂಬವರ ಪತ್ನಿ ರಝಿಯಾ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆಯಿಂದ ಎದ್ದು ಓಡಾಡದ ಸ್ಥಿತಿಯಲ್ಲಿದ್ದರು.

ರಝಿಯಾರವರಿಗೆ ಶ್ರೀ ಭಗವಾನ್ ಸಂಘ ಒದಗಿಸಿದ ಗಾಲಿಕುರ್ಚಿಯನ್ನು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಉಪಾದ್ಯಕ್ಷ ರಾಜಾರಾಮ ಕಳಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರತ್ ಕಾಸ್ಪಾಡಿ, ಕಾರ್ಯದರ್ಶಿ ಹರ್ಷಿತ್ ನೆಲ್ಲಿಪುಣಿ, ನಿರ್ದೇಶಕರಾದ ಯಶವಂತ ದೇವರಗುಂಡ, ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನದ ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಾಮಾಜಿಕ ಸೇವೆಯನ್ನು ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಶ್ರೀ ಭಗವಾನ್ ಸಂಘ ಅಶಕ್ತರ ನೆರವು ನಿಧಿ ಸಂಗ್ರಹಣೆಗಾಗಿ ಕಳೆದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಳಿಗೆ ತೆರೆಯುವ ಮೂಲಕ ಗಮನ ಸೆಳೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net