

ಲಿಂಗದಹಳ್ಳಿ: ದೇಶದ ಬಡ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ನೀಡಲಾಗುವುದು ಅಗತ್ಯ ಪರಿಕರಗಳ ಕಿಟ್‌ಅನ್ನು ಅಂಚೆ ಪಾಲಕರಾದ ನಾರಾಯಣ ನಾಯ್ಕ ಮತ್ತು ಪಂಚಾಕ್ಷರಿ ಲಿಂಗದಹಳ್ಳಿಯ ಫಲಾನುಭವಿ ಎಲ್.ಪ್ರಸನ್ನ ಅವರಿಗೆ ವಿತರಿಸಿದರು.
ನಂತರ ಅಂಚೆ ಪಾಲಕ ಟಿ.ನಾರಾಯಣ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಮಹಿಳೆಯರು ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಅಂಚೆ ಕಚೇರಿ ಮೂಲಕ ಸಣ್ಣ ಉಳಿತಾಯ, ಅಂಚೆ ಜೀವವಿಮೆ, ಮಹಿಳಾ ಸಮ್ಮಾನ್, ಸುಕಾನ್ಯ ಸಮೃದ್ದಿ, ಮುಂತಾದ ಖಾತೆಗಳನ್ನು ತೆರೆದು ಅನುಕೂಲ ಕಲ್ಪಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.