ಬಡ ಮಕ್ಕಳ ಶಿಕ್ಷಣಕ್ಕೆ ವಿದ್ಯಾನಿಧಿ ಕಿಟ್ ವಿತರಣೆ

ಲಿಂಗಸುಗೂರಿನಲ್ಲಿ ಹಮ್ಮಿಕೊಂಡಿದ್ದ ವಾತ್ಸಲ್ಯ ಫಲಾನುಭವಿ ಮಕ್ಕಳಿಗೆ ವಿದ್ಯಾನಿಧಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಪ್ರಾದೇಶಿಕ ಅಧಿಕಾರಿ ಚಂದ್ರಶೇಖರ ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಮೌನೇಶ ನಾಯಕ, ಜಿಲ್ಲಾ ಜನಜಾಗೃತಿ ಸೇವಾ ಸಂಸ್ಥೆ ಸದಸ್ಯ ಮಹ್ಮದ್ ರಫಿ, ಕೃಷಿ ಅಧಿಕಾರಿ ಮಹ್ಮದ ಅಲಿ ನಾಗಡದಿನ್ನಿ, ಜ್ಞಾನ ವಿಕಾಸ ಯೋಜನಾಧಿಕಾರಿ ಅನುರಾಧಾ ಇದ್ದರು.

Published on

ಲಿಂಗಸುಗೂರು: ಬಡ ವಿದ್ಯಾರ್ಥಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬೆನ್ನೆಲುಬಾಗಿದೆ ಎಂದು ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಹೇಳಿದರು.

ಪಟ್ಟಣದ ಯೋಜನಾ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾತ್ಸಲ್ಯ ಫಲಾನುಭವಿ ಮಕ್ಕಳಿಗೆ ವಿದ್ಯಾನಿಧಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ 46 ಕುಟುಂಬಗಳಿಗೆ, ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕಿಟ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 17 ಸಾವಿರ ಸ್ವ ಸಹಾಯ ಸಂಘ ರಚನೆಯಾಗಿವೆ. ಇದರಲ್ಲಿ ಒಂದೂವರೆ ಲಕ್ಷ ಕುಟುಂಬಗಳು ನೇರವಾಗಿ ಭಾಗವಹಿಸಿ ಸಂಘದ ಎಲ್ಲ ಸೌಲಭ್ಯ ಪಡೆದು ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಬಳಸುತ್ತಿದ್ದಾರೆ. ಸಂಸ್ಥೆಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net