

ಮುಂಡರಗಿ: ಶ್ರೀಧಗ್ರಾ ಯೋಜನೆಯಿಂದ ಪ್ರತಿ ತಿಂಗಳು ಆಹಾರ ಮತ್ತು ಆರೈಕೆಗಾಗಿ 1 ಸಾವಿರ ರೂ. ಹಾಗೂ ಆಯ್ದ 4 ಮಾಸಾಶನ ಫಲಾನುಭವಿಗಳಿಗೆ ನಿತ್ಯದ ಬದುಕಿಗೆ ಬೇಕಾಗುವ ಸಾಮಗ್ರಿಗಳ ವಾತ್ಸಲ್ಯ ಕಿಟ್ ವಿತರಣೆ ಕೈಗೊಳ್ಳಲಾಗಿದೆ ಎಂದು ತಾಲೂಕು ಯೋಜನಾಧಿಕಾರಿ ವಿಶಾಲಾ ಮಲ್ಲಾಪುರ ಹೇಳಿದರು.
ತಾಲೂಕಿನ ಪೇಠಾಲೂರ ಗ್ರಾಮದಲ್ಲಿ ಧಗ್ರಾ ಯೋಜನೆಯಿಂದ ಅಗತ್ಯ ಸಾಮಗ್ರಿಗಳ ವಾತ್ಸಲ್ಯ ಕಿಟ್ ಗುರುವಾರ ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ 57 ಫಲಾನುಭವಿಗಳಿಗೆ ಈಗಾಗಲೇ ಪ್ರತಿ ತಿಂಗಳು 1 ಸಾವಿರ ರೂ. ಮಾಸಾಶನ ವಿತರಿಸಲಾಗುತ್ತಿದೆ. ಅಲ್ಲದೆ, 34 ವಾತ್ಸಲ್ಯ ಕಿಟ್ಗಳನ್ನೂ ವಿತರಿಸಲಾಗಿದೆ ಎಂದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ ಜೈನ್, ಮೇಲ್ವಿಚಾರಕ ರೇವಪ್ಪ, ರವಿಕುಮಾರ, ಇತರರಿದ್ದರು.