ಬಿಸಿಯೂಟ ಸಿಬ್ಬಂದಿಗೆ ಸಮವಸ್ತ್ರ ವಿತರಣೆ

Distribution of uniforms to the heating staff
ಇಂಡಿಯ ಪ್ರವಾಸಿಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಾಲೂಕಿನಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿದರು. ತಾಪಂ ಇಒ ಸುನಿಲ ಮದ್ದಿನ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಯರಗುದ್ರಿ, ಬಿಇಒ ವಸಂತ ರಾಠೋಡ ಇತರರಿದ್ದರು.
Published on

ಇಂಡಿ: ಜಿಪಂ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರವಾಸಿಮಂದಿರದಲ್ಲಿ ತಾಲೂಕಿನ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಗುರುವಾರ ಸಮವಸ್ತ್ರಗಳನ್ನು ಶಾಸಕ ಯಶವಂತರಾಯಗೌಡ ಪಾಟೀಲ ವಿತರಿಸಿದರು.

ನಂತರ ಮಾತನಾಡಿದ ಅವರು, ಬಿಸಿಯೂಟ ಯೋಜನೆ ಅಡಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಆಹಾರ ತಯಾರಿಕೆ, ಸಂರಕ್ಷಣೆ ದೃಷ್ಟಿಯಿಂದ ಸಮವಸ್ತ್ರವನ್ನ ವಿತರಿಸಲಾಗಿದೆ. ಶುದ್ಧವಾದ ಮತ್ತು ಶುಚಿಯಾದ ರೀತಿಯಲ್ಲಿ ಆಹಾರ ತಯಾರಿಸಿ ಮಕ್ಕಳಿಗೆ ಬಡಿಸಬೇಕು ಎಂದು ಬಿಸಿಯೂಟ ಅಡುಗೆ ಸಹಾಯಕರಿಗೆ ಸೂಚಿಸಿದರು.

ಜಿಪಂ ಯೋಜನಾ ನಿರ್ದೇಶಕ ಸಿ.ಬಿ. ದೇವರಮನೆ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಆರೋಗ್ಯದೊಂದಿಗೆ ಅವರಿಗೆ ಪೌಷ್ಠಿಕ ಆಹಾರವನ್ನು ತಯಾರಿಸುವ ಸಂದರ್ಭದಲ್ಲಿ ತಲೆಕೂದಲು ಅಡುಗೆಯಲ್ಲಿ ಬೀಳದಂತೆ ಹಾಗೂ ಬೆಂಕಿ ತಗುಲದಂತೆ ಸುರಕ್ಷಿತವಾಗಿ ಅಡುಗೆ ತಯಾರಿಸಲು ಸಮವಸ್ತ್ರ ಮಾಡಲಾಗಿದೆ. ಶುಚಿತ್ವವನ್ನು ಕಾಪಾಡಿಕೊಂಡು ಆರೋಗ್ಯಕರ ಅಡುಗೆ ತಯಾರಿಸಬೇಕು. ಸಮವಸ್ತ್ರ ತಯಾರಿಸಿದ ಎನ್‌ಆರ್‌ಎಲ್‌ಎಂನ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಸ್ವಉದ್ಯೋಗ ಮಾಡುವುದರೊಂದಿಗೆ ತಮ್ಮ ಆರ್ಥಿಕ ಸಬಲೀಕರಣ ಮಾಡಿಕೊಂಡು ಈ ಸಮವಸ್ತ್ರವನ್ನು ತಯಾರಿಸಿದ್ದಾರೆ ಎಂದರು.

ಸಮವಸ್ತ್ರ ತಯಾರಿಸಿದ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರನ್ನು ಸನ್ಮಾನಿಸಲಾಯಿತು. ತಾಪಂ ಇಒ ಸುನಿಲ ಮದ್ದಿನ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಯರಗುದ್ರಿ, ಬಿಇಒ ವಸಂತ ರಾಠೋಡ, ನಂದೀಪ ರಾಠೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಂಗಲಾ ಹಿರೇಮನಿ, ಅಪ್ಪಶ ಲಾಳಸೇರಿ, ಕ್ರೀಡಾ ಅಧಿಕಾರಿ ಎ.ಎಸ್. ಲಾಳಸೆರಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net