

ಮಡಿಕೇರಿ: ಮದೆ ಮಹೇಶ್ವರ ವಿದ್ಯಾಸಂಸ್ಥೆಯಲ್ಲಿ ೨೦೨೪ ೨೫ನೇ ಶೈಕ್ಷಣಿಕ ವ?ರ್ದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಉಚಿತ ವಿತರಣಾ ಕಾರ್ಯಕ್ರಮ ಬುಧವಾರ ಜರುಗಿತು.
ಸಮವಸ್ತ್ರಗಳನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ, ಮಡಿಕೇರಿ ನಗರದ ನಿವಾಸಿ ಹ್ಯಾರಿಸ್, ಪ್ರಸ್ತುತ ಕುಟುಂಬ ಸಮೇತರಾಗಿ ದುಬೈಯಲ್ಲಿ ನೆಲೆಸಿರುವ ಇವರು ಕೊಡಿಸಿರುತ್ತಾರೆ. ಮದೆ ಮಹೇಶ್ವರ ವಿದ್ಯಾಸಂಘದ ಅಧ್ಯಕ್ಷ ಹುದೇರಿ ರಾಜೇಂದ್ರರವರು ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ನೆರವೇರಿಸಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರದಂತೆ ಸಮಯ ಪಾಲನೆ, ಶಿಸ್ತು ಮತ್ತು ಓದು ಬರಹದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಮುಂದೆ ತಂದೆ ತಾಯಿಯರಿಗೆ ಮತ್ತು ಊರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಉಣ್ಣಿಕೃ?್ಣ, ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ, ಉಪನ್ಯಾಸಕ ಪರಶುರಾಮಪ್ಪ, ಉಪನ್ಯಾಸಕಿ ಯೋಗಿತಾ, ಕನ್ನಡ ಉಪನ್ಯಾಸಕ ಶ್ರೀನಿವಾಸ್, ಆಂಗ್ಲ ಭಾ?ೆ ಉಪನ್ಯಾಸಕ ಹೇಮಂತ್ ಇದ್ದರು.