ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

15blrp1
ಬೇಲೂರು ಪಟ್ಟಣದಲ್ಲಿ ಎಂ.ಎಸ್.ನಾಗೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದರು. ಗಂಗೂರು ಶಿವಕುಮಾರ್, ಬುಜಂಗ, ಅಮಿತ್ ಶೆಟ್ಟಿ, ಅಡಗೂರು ಬಸವರಾಜು ಇತರರು ಇದ್ದರು.
Published on

ಬೇಲೂರು: ನಾನು ಚುನಾವಣೆಗಾಗಿ ಬಂದವನಲ್ಲ. ಸೇವೆಗಾಗಿ ಬಂದವನು, ರಾಜ್ಯಾದ್ಯಂತ ನಮ್ಮ ಟ್ರಸ್ಟ್‌ನ ಸೇವೆ ನಿರಂತರವಾಗಿ ನಡೆಯುತ್ತಿದೆ ಎಂದು ಎಂ.ಎಸ್.ನಾಗೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಹೇಳಿದರು.

ತಮ್ಮ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದಲ್ಲಿ ಆಟೋ ಚಾಲಕರಿಗೆ ಗುರುವಾರ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಕೆಲ ಜನರು ಸಿದ್ದೇಶ್ ನಾಗೇಂದ್ರ ಚುನಾವಣೆಗಾಗಿ ಬಂದವರು ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಕಚೇರಿ ಬೇಲೂರಿನಲ್ಲಿದೆ. ಅಲ್ಲಿ ಪ್ರತಿದಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ನನಗೆ ಸಾರ್ವಜನಿಕರು ಆಹ್ವಾನ ನೀಡಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ನನ್ನ ಕೊನೆ ಉಸಿರಿರುವ ತನಕ ಬೇಲೂರಿನ ಜನರ ಸೇವೆ ಮಾಡುತ್ತೇನೆ. ಅವರ ಸಹಕಾರ ನೆನೆಯುತ್ತೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅವರ ಸೇವೆ ದೇಶಕ್ಕೆ ಅಗತ್ಯವಿದ್ದು, ಅವರ ಗೆಲುವುಗಾಗಿ ಚನ್ನಕೇಶವನಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

ಮುಖಂಡರಾದ ಗಂಗೂರು ಶಿವಕುಮಾರ್, ಬುಜಂಗ, ಅಮಿತ್ ಶೆಟ್ಟಿ, ಅಡಗೂರು ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net