ಸಂಘಟಕರಿಗೆ ಸಮವಸ್ತ್ರ, ಲೇಖನ ಸಾಮಗ್ರಿ ಹಸ್ತಾಂತರ

ಫೋಟೋ ಶೀರ್ಷಿಕೆ 13 ಸಿಆರ್_ಪಿ-3ಎ.
ಚನ್ನರಾಯಪಟ್ಟಣದಲ್ಲಿ ಶನಿವಾರದಿಂದ ನಡೆಯಲಿರುವ 2 ದಿನಗಳ ದಲಿತ ಚಳವಳಿಯ ಅಧ್ಯಯನ ಶಿಬಿರದ ಶಿಬಿರಾರ್ಥಿಗಳಿಗೆ ನೀಡಲಾಗುವ ಸಮವಸ್ತ್ರವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಕರಿಗೆ ಹಸ್ತಾಂತರಿಸಿದರು.
Published on

ಚನ್ನರಾಯಪಟ್ಟಣ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರದಿಂದ ನಡೆಯಲಿರುವ ಎರಡು ದಿನಗಳ ಅಧ್ಯಯನ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಸಮವಸ್ತ್ರ ಮತ್ತು ಲೇಖನ ಸಾಮಗ್ರಿಗಳನ್ನು ಶಾಸಕ ಸಿ.ಎನ್.ಬಾಲಕೃಷ್ಣ ಕೊಡುಗೆಯಾಗಿ ನೀಡಿದ್ದು, ಅದನ್ನು ಶುಕ್ರವಾರ ಸಂಘಟಕರಿಗೆ ಹಸ್ತಾಂತರಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅ.13, 14 ರಂದು ‘ದಲಿತ ಚಳವಳಿಯ ಮುಂದಿನ ಹೆಜ್ಜೆಗಳು’ ಕುರಿತು ಅಧ್ಯಯನ ಶಿಬಿರ ನಡೆಯಲಿದೆ. ಶಿಬಿರಕ್ಕೆ ಈಗಾಗಲೇ ತಾಲೂಕಿನ ವಿವಿಧೆಡೆಯಿಂದ 120 ಯುವಕ, ಯುವತಿಯರು ನೋಂದಣಿ ಮಾಡಿಕೊಂಡಿದ್ದು, ಇವರಿಗೆ ಉಚಿತವಾಗಿ ಸಮವಸ್ತ್ರ ಮತ್ತು ನೋಟ್‌ಬುಕ್ ಹಾಗೂ ಲೇಖನಿಯನ್ನು ನೀಡುತ್ತಿದ್ದು, ಅವುಗಳನ್ನು ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಕಾರ್ಯಕ್ರಮ ರೂಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಗೋವಿಂದ್‌ರಾಜ್ ದಿಂಡಗೂರು ಮತ್ತವರ ತಂಡಕ್ಕೆ ನೀಡಿದರು.

ಮುಖಂಡರಾದ ಆರ್.ಮಂಜುನಾಥ್, ರಮೇಶ್, ಕೇಶವಮೂರ್ತಿ, ರುದ್ರೇಶ್, ಬಾಲಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net