ಮಹಿಳಾ ವ್ಯಾಪಾರಿಗಳಿಗೆ ಛತ್ರಿ ವಿತರಣೆ

Distribution of umbrellas to women traders
ಬಾಗಲಕೋಟೆ ಮಹಿಳಾ ವ್ಯಾಪಾರಿಗಳಿಗೆ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಛತ್ರಿ ನೀಡಿದರು. ಮುಖಂಡರಾದ ರೇಣುಕಾ ನ್ಯಾಮಗೌಡರ, ಜಯಶ್ರೀ ಗುಳಬಾಳ, ಸಾವಿತ್ರಿ ಗಾಜಿ ಇತರರಿದ್ದಾರೆ.
Published on

ಬಾಗಲಕೋಟೆ: ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸುತ್ತಮುತ್ತಲು ಬಿಸಿಲಿಗೆ ಕೂತು ವ್ಯಾಪಾರ ಮಾಡುತ್ತಿರುವ ಮಹಿಳಾ ವ್ಯಾಪಾರಿಗಳಿಗೆ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಛತ್ರಿ ನೀಡಿದರು.

ನಂತರ ಮಾತನಾಡಿದ ಅವರು, ಸ್ವಾವಲಂಬನೆ ಜೀವನ ಸಾಗಿಸುತ್ತಿರುವ ಮಹಿಳಾ ಸಹೋದರಿಯರಿಗೆ, ತಾಯಂದಿರು ಸಮಾಜಕ್ಕೆ ಮಾದರಿ. ಬಿಸಿಲಿನ ಝಳ ತೀವ್ರವಾಗಿದ್ದರೂ ಗಟ್ಟಿತನ ಮೆರೆದು ಸ್ಫೂರ್ತಿ ತುಂಬಿದ್ದಾರೆ. ಅವರಿಗೆ ಛತ್ರಿ ನೀಡುವ ಮೂಲಕ ಸಣ್ಣ ಸಹಾಯ ಮಾಡಿದ್ದೇವಷ್ಟೇ ಎಂದರು.

ಮುಖಂಡರಾದ ರೇಣುಕಾ ನ್ಯಾಮಗೌಡರ, ಜಯಶ್ರೀ ಗುಳಬಾಳ, ಸಾವಿತ್ರಿ ಗಾಜಿ, ಅನ್ನಪೂರ್ಣ ಗೂಗ್ಯಾಳ, ಮಮ್ತಾಜ್ ಸುತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net