ಅರಿವಿನಮನೆ ಲಯನ್ಸ್ ನಿಂದ ಟ್ರ್ಯಾಕ್‌ಸೂಟ್ ವಿತರಣೆ

Published on

ಪಂಚನಹಳ್ಳಿ: ಮಕ್ಕಳಿಗೆ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದ್ದು, ಅದಕ್ಕೆ ಶಾಲೆಗಳು ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್ ಆರಾಧ್ಯ ಹೇಳಿದರು. ಅರಿವಿನಮನೆ ಲಯನ್ಸ್ ಕ್ಲಬ್ನಿಂದ ಸಿಂಗಟಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 177 ಟ್ರ್ಯಾಕ್‌ಸೂಟ್ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕೆ ಪ್ರೋತ್ಸಾಹಿಸಲು ಸಂಘ, ಸಂಸ್ಥೆಗಳು ಅನೇಕ ಕೊಡುಗೆ ನೀಡುತ್ತಿವೆ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದರು. ಮುಖ್ಯಶಿಕ್ಷಕಿ ಜಯಂತಿ, ಸಹ ಶಿಕ್ಷಕರಾದ ಜಗದೀಶ್, ರಾಜು, ಉಮೇಶ್, ಲೋಕನಾಯ್ಕ , ಸಿಆರ್‌ಪಿ ಪ್ರಿಯಾ, ಎಸ್‌ಡಿಎಂಸಿ ಸದಸ್ಯರಾದ ಜಯಣ್ಣ, ಬಾಬು, ನಟರಾಜ್, ಮಯೂರ, ಹೇಮಾವತಿ ,ಕಲಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net