ಸಂಶಿ ಅಂಗನವಾಡಿಗಳಿಗೆ ಆಟಿಕೆ ಸಾಮಗ್ರಿ ವಿತರಣೆ

30 samshi-1
Published on

ಸಂಶಿ: ಅಮೃತ ಗ್ರಾಮ ಯೋಜನೆಯಡಿ ಸಂಶಿ ಗ್ರಾಮದಲ್ಲಿರುವ 15 ಅಂಗನವಾಡಿ ಕೇಂದ್ರಗಳ ಮಕ್ಕಳಿಗಾಗಿ ಅಂದಾಜು 2.50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಜಾರುಗುಂಡಿ, ಸಣ್ಣ ಬೈಸಿಕಲ್, ಲಗೋರಿ, ಚೆಂಡು ಇತ್ಯಾದಿ ಆಟಿಕೆ ಸಾಮಾನುಗಳನ್ನು ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ರಾಜು ಪುಟ್ಟಣ್ಣನವರ, ಗೌರಮ್ಮ ಹರಕುಣಿ, ಗಿರೀಶಗೌಡ ಪಾಟೀಲ, ರವಿ ಸಾಲುಂಕೆ, ದೇವಣ್ಣ ಮೊರೋಪಟತ, ಫಕೀರೇಶ ಪಶುಪತಿಹಾಳ, ಶಂಕ್ರಣ್ಣ ಬ್ಯಾಹಟ್ಟಿ, ಹನುಮಂತ ಪುಟ್ಟಣ್ಣವರ, ಸುಶೀಲಮ್ಮ ಗಂಡಮಾಲಿ, ಶೋಭಾ ಗಡಗಿ, ಸಬೀನಾಭಾನು ನದಾಫ ಹಾಗೂ ಅಂಗನವಾಡಿ ಕಾರ್ಯಕರ್ತರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net