

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬಳಗದ ವತಿಯಿಂದ ಮಂಗಳವಾರ 77ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಬೋಗಾದಿಯಲ್ಲಿರುವ ತಾಯಿ ಮತ್ತು ಕಿವುಡು ಮಗುವಿನ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 75 ಕಿವುಡು ಮಕ್ಕಳಿಗೆ ಆಟಿಕೆಗಳು, ನೋಟ್ ಬುಕ್, ಪೆನ್ಸಿಲ್, ನೀತಿಕತೆ ಪುಸ್ತಕಗಳ ವಿತರಣೆ ಮಾಡಲಾಯಿತು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಡಾ. ಜಿ.ಎಂ. ವಾಮದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 40 ವರ್ಷಗಳಿಂದ ಕಿವುಡು ಮಕ್ಕಳ ಪೋಷಕರ ಸಂಘದ ಪದಾಧಿಕಾರಿಗಳು ಮಕ್ಕಳ ಭವಿಷ್ಯವನ್ನು ರೂಪಿಸಿ ಉನ್ನತ ವ್ಯಾಸಂಗ ಮಾಡಲು ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳ ಕಲಿಕಾ ತರಬೇತಿಗೆ ಶ್ರಮಿಸುತ್ತಿರುವ ಶಿಕ್ಷಕ ವೃಂದದ ಸೇವೆ ಅನನ್ಯ ಎಂದರು.
ಇನ್ನು ಮುಂದೆ ಪ್ರತಿವರ್ಷ ಸ್ವಾತಂತ್ರೃ ದಿನಾಚರಣೆ ದಿನದಂದು ಮಕ್ಕಳ ತರಬೇತಿಗೆ ಬೇಕಾದ ಅವಶ್ಯಕ ಸಾಧನಗಳನ್ನು ವಿತರಿಸುವುದಾಗಿ ತಿಳಿಸಿದರು.
ಕಿವುಡು ಮಕ್ಕಳ ಪೋಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎ. ದಿನಕರಶೆಟ್ಟಿ, ಸಂಸ್ಥೆಯ ಮುಖ್ಯಸ್ಥರಾದ ಆರ್.ಪರಿಮಳಾ, ಬಳಗದ ಕಾರ್ಯದರ್ಶಿ ಹೇಮರೆಡ್ಡಿ, ಕನಕಾ ಹೇಮ ರೆಡ್ಡಿ ಇತರರಿದ್ದರು.