

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ನಿರುದ್ಯೋಗ ಯುವಕ- ಯುವತಿಯರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಯಿತು.
ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 100 ಜನರಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿತರಿಸಿದರು. ನಂತರ ಮಾತನಾಡಿದ ಅವರು, ಸ್ವಯಂ ಉದ್ಯೋಗಕ್ಕೆ ಒತ್ತು ನೀಡುವ ಮೂಲಕ ಹೊಸ ಬದುಕು ರೂಪಿಸಿಕೊಳ್ಳಲು ಈ ಯೋಜನೆ ಅನುಕೂಲಕರವಾಗಲಿದೆ. ರಾಜ್ಯದಾದ್ಯಂತ 450 ಟ್ಯಾಕ್ಸಿಗಳನ್ನು ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮಾತನಾಡಿ, ಮುಂದಿನ ವರ್ಷದಿಂದ ಇದೇ ಅನುದಾನದಲ್ಲಿ ಪ್ರವಾಸಿ ಟ್ಯಾಕ್ಸಿಯ ಜತೆಗೆ ಬೇರೆ ಸಲಕರಣೆಗಳನ್ನು ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಕ್ರೀಡಾ ಸಲಕರಣೆಗಳು, ಜೆಟ್ ಸ್ಕೀಗಳು, ಮೊಬೈಲ್ ಟಾಯ್ಲೆಟ್ ಇತ್ಯಾದಿ ವಿತರಿಸಲಾಗುವುದು ಎಂದರು.
ಬಂಡಾಯಕ್ಕೆ ಮುಖ್ಯ ಪಾತ್ರಧಾರರು ಸಿದ್ದರಾಮಯ್ಯ. ಅವರಿಗೆ ತಮ್ಮ ಪಕ್ಷದಲ್ಲಿನ ಬಂಡಾಯ ತಣಿಸಲು ಆಗಲಿಲ್ಲ. ಮೊದಲು ನಿಮ್ಮ ಪಕ್ಷವನ್ನು ನೋಡಿಕೊಳ್ಳಿ.ನಮ್ಮಲ್ಲಿ ಬಂಡಾಯ ಏಳಿಸೋ ನಿಮ್ಮ ಪ್ರಯತ್ನ ಹುಸಿಯಾಗಲಿದೆ. -ಸಿ.ಟಿ. ರವಿ ಪ್ರವಾಸೋದ್ಯಮ ಸಚಿವ