ಅಂಗನವಾಡಿ ಕೇಂದ್ರಗಳಿಗೆ ಟೇಬಲ್, ಬೀರು ವಿತರಣೆ

25_Bailukuppe_Naviluru_1
Published on

ಬೈಲುಕುಪ್ಪೆ: ನವಿಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಅಂಗನವಾಡಿ ಕೇಂದ್ರಗಳಿಗೆ ಟೇಬಲ್ ಮತ್ತು ಬೀರು ಇತ್ತೀಚೆಗೆ ವಿತರಿಸಲಾಯಿತು.

ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಯಶೋದಮ್ಮ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ನಮ್ಮ ಪಂಚಾಯಿತಿಗೆ ಪತ್ರ ಬರೆದು ಕೋರಿಕೆ ಮೇರೆಗೆ ನಮ್ಮ ಆಡಳಿತ ಮಂಡಳಿ ಪಿಡಿಒ ಜತೆ ಚರ್ಚಿಸಿ ನಿರ್ಣಯದಂತೆ 2024-25ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯ ನವಿಲೂರು 2 ಅಂಗನವಾಡಿ ಕೇಂದ್ರ ಸೇರಿದಂತೆ ಆಯುರ್ಬೀಡು, ಬೆಂಬತ್ತಿ, ಮಲಗಿನ ಕೆರೆ, ಕೊರ್ಲಾ ಹೊಸಹಳ್ಳಿ, ಕರಡಿ ಬೊಕ್ಕೆ ಸೇರಿದಂತೆ 6 ಕೇಂದ್ರಕ್ಕೂ ವಿತರಿಸಿದ್ದೇವೆ ಎಂದರು.

ಅಂಗನವಾಡಿ ಶಿಕ್ಷಕಿಯರು ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆತರಬೇಕು. ಪಾಲಕರು ಕೂಡ ಅಂಗವಾಡಿಗಳಿಗೆ ಮಕ್ಕಳನ್ನು ಕಳಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಪಿಡಿಒ ಟಿ.ರವಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಎನ್.ಮಹದೇವ್, ಚೆಲುವರಾಜು, ಸರೋಜಾ, ಮಂಜುಳಾ, ಅಂಗನವಾಡಿ ಶಿಕ್ಷಕಿ ಶೋಭಾ, ಕುಮಾರಿ, ರಿಹಾನುಬಾನು, ಗಿರಿಜಾ, ಪುಟ್ಟಲಕ್ಷ್ಮೀ , ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net