ಮಾರುತಿ ದೇಗುಲ ಜೀಣೋದ್ಧಾರಕ್ಕೆ ಸಹಾಯಧನ ವಿತರಣೆ

LXR CHECK VITARANE
Published on

ಲಕ್ಷೇಶ್ವರ: ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ತುಂಬುವ ಕಾರ್ಯಕ್ರಮಗಳು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿವೆ ಎಂದು ಶ್ರೀಧಗ್ರಾಯೋ ಸಂಸ್ಥೆಯ ಜಿಲ್ಲಾ ನಿರ್ದೆಶಕ ಯೋಗೇಶ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಶಿಗ್ಲಿ ನಾಕಾ ಬಳಿ ಮಾರುತಿ ದೇವಸ್ಥಾನದ ಜೀಣೋದ್ಧಾರ ಕಾಮಗಾರಿಗೆ ಮಾರುತಿ ದೇವಸ್ಥಾನ ಜೀಣೋದ್ಧಾರ ಸಮಿತಿಗೆ ಶ್ರೀಕ್ಷೇತ್ರ ಧಗ್ರಾಯೋ ವತಿಯಿಂದ 1.50 ಲಕ್ಷ ರೂ.ಗಳ ಸಹಾಯಧನದ ಚೆಕ್ ಅನ್ನು ಶನಿವಾರ ನೀಡಿ ಅವರು ಮಾತನಾಡಿದರು. ದೇವಸ್ಥಾನದ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು. ಸಹಾಯಧನ ಸದ್ಬಳಕೆಯಾಗಬೇಕು ಎಂದರು.

ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು. ಪೂರ್ಣಾಜಿ ಖರಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಳೆಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ತಿಪ್ಪಣ್ಣ ಸಂಶಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ರಾಜಣ್ಣ ಕುಂಬಿ, ಚಂಬಣ್ಣ ಬಾಳಿಕಾಯಿ, ಪೊ›.ಆರ್.ಎನ್. ಪಾಟೀಲ, ಶಿವಯೋಗಿ ಅಂಕಲಕೋಟಿ, ನವೀನ ಬೆಳ್ಳಟ್ಟಿ, ಫಕೀರೇಶ ಮ್ಯಾಟಣ್ಣವರ, ಫಕೀರೇಶ ರಟ್ಟಿಹಳ್ಳಿ, ಯೋಜನಾಧಿಕಾರಿ ಪುನೀತ್, ದುರ್ಗೆಶ ನಾಯಕ, ಓಂಕಾರಪ್ಪ ಗಜಾಕೋಶ, ಸೋಮಣ್ಣ ಬಸಾಪೂರ, ಶೃತಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಚಂದ್ರಶೇಖರ ಹುಣಸಿಕಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net