ಜೋಡಿಹೊಡಾಘಟ್ಟ ಸರ್ಕಾರಿ ಶಾಲೆಗೆ ನೆರವು: ಖಾಸಗಿ ಸಂಸ್ಥೆ ಉದ್ಯೋಗಿಯಿಂದ ಕಲಿಕಾ ಸಾಮಗ್ರಿ ವಿತರಣೆ

Distribution of study material mandya
Published on

ಮಂಡ್ಯ: ತಾಲೂಕಿನ ಜೋಡಿಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉದ್ಯೋಗಿ ಅಣ್ಣೂರು ಎ.ಆರ್.ಚಂದ್ರೇಶ್ ರ‌್ಯಾಪಿಡ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಾಗೂ ತಟ್ಟೆ ಲೋಟ ವಿತರಣೆ ಮಾಡಿದರು.

ಕೆ.ಎಂ.ದೊಡ್ಡಿ ರೋಟರಿ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ಇಂಜಿನಿಯರ್ ಬಿ.ವಿ.ಶಂಕರೇಗೌಡ, ಕೆಲಸದಲ್ಲಿರುವ ಯುವಕರು ಸಮಾಜಸೇವೆಗೆ ಮುಂದಾಗಿರುವುದು ಖುಷಿ ನೀಡಿದೆ. ಟೊಯೋಟ ಉದ್ಯೋಗಿ ಅಣ್ಣೂರು ಚಂದ್ರೇಶ್ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಶೈಕ್ಷಣಿಕ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಾನಿ ಎ.ಆರ್.ಚಂದ್ರೇಶ್ ಮಾತನಾಡಿ, 8000 ರೂ ಮೌಲ್ಯದ 20 ರ‌್ಯಾಪಿಡ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ಹಾಗೂ 3000 ರೂ ಮೌಲ್ಯದ 10 ತಟ್ಟೆ ಹಾಗೂ ಲೋಟ ವಿತರಿಸಲಾಗಿದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮೂಲಕ ಮಾತನಾಡುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಕರಾದ ಕೆ.ಟಿ.ನಾರಾಯಣರಾಜ್ ಅರಸ್, ಡಿ.ಎಸ್.ಕೃಷ್ಣೇಗೌಡ, ಕೆ.ಆರ್.ಶಶಿಧರ ಈಚಗೆರೆ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ, ಎನ್.ಕೆ.ಪವಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net