ಛಲದೊಂದಿಗೆ ಗುರಿ ಸಾಧನೆ

dattinidhi
ನವೀನಚಂದ್ರ ಮರವಂತೆ ಸ್ಮಾರಕ ದತ್ತಿನಿಧಿ ವತಿಯಿಂದ ಮರವಂತೆ ಗ್ರಾಮದ ಕನ್ನಡ ಖಾರ್ವಿ ಸಮುದಾಯದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು
Published on

ಗಂಗೊಳ್ಳಿ : ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ತಲಪಬೇಕಾದ ಗುರಿ ನಿಗದಿ ಮಾಡಿಕೊಳ್ಳಬೇಕು. ಆ ಗುರಿ ಸಾಧಿಸುವ ಛಲದೊಂದಿಗೆ ಮುನ್ನಡೆಯಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ ಹೇಳಿದರು.

ನವೀನಚಂದ್ರ ಮರವಂತೆ ಸ್ಮಾರಕ ದತ್ತಿನಿಧಿ ವತಿಯಿಂದ ಮರವಂತೆ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ಮರವಂತೆ ಗ್ರಾಮದ ಕನ್ನಡ ಖಾರ್ವಿ ಸಮುದಾಯದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಿ ಅವರು ಮಾತನಾಡಿದರು.

ದತ್ತಿನಿಧಿಯ ಸಂಸ್ಥಾಪಕ ಎಂ.ಶಂಕರ ಖಾರ್ವಿ, ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸಂಕಷ್ಟ ನೆನಪಿಸಿಕೊಂಡರು. ಆ ಹಿನ್ನೆಲೆಯಲ್ಲಿ ಅಕಾಲಿಕವಾಗಿ ಅಗಲಿದ ತಮ್ಮ ಪುತ್ರ ನವೀನಚಂದ್ರರ ಹೆಸರಿನಲ್ಲಿ ವಿವಿಧ ಹಂತಗಳಲ್ಲಿ ಕಲಿಯುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಆರು ವರ್ಷಗಳಿಂದ ಶಿಷ್ಯವೇತನ ನೀಡುತ್ತ ಬರಲಾಗಿದೆ ಎಂದರು.

18 ವಿದ್ಯಾರ್ಥಿಗಳಿಗೆ 1.5 ಲಕ್ಷ ರೂ.ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಮುದಾಯದ ಹಿರಿಯರಾದ ಪಿ.ಸಂಜೀವ ಖಾರ್ವಿ ವಂದಿಸಿದರು. ಮನೋಹರ ಖಾರ್ವಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net