ಬೀರೂರಿನ 87 ಲಾನುಭವಿಗಳಿಗೆ ಸ್ಪಿಂಕ್ಲರ್ ಜೆಟ್, ಪೈಪ್ ವಿತರಣೆ

10 BIRUR 01
ಬೀರೂರಿನ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸ್ಪಿಂಕ್ಲರ್ ಜೆಟ್, ಪೈಪ್‌ಗಳನ್ನು ನೀಡಲಾಯಿತು.
Published on

ಬೀರೂರು: ಬೀರೂರಿನ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರದಿಂದ ರಿಯಾಯಿತಿ ದರದಲ್ಲಿ ಸ್ಪಿಂಕ್ಲರ್ ಜೆಟ್ ಮತ್ತು ಪೈಪ್‌ಲೈನ್‌ಗಳನ್ನು ರೈತರಿಗೆ ವಿತರಿಸಲಾಯಿತು.
ಮಳೆ ಕೊರತೆಯಿಂದ ತುಂತುರು ಹಾಗೂ ಹನಿ ನೀರಾವರಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಸ್ಪಿಂಕ್ಲರ್ ಜೆಟ್‌ಗೆ ಈಗಾಗಲೇ 310 ರೈತರು ಹಣ ಸಂದಾಯ ಮಾಡಿದ್ದಾರೆ. ಸ್ವಸ್ತಿಕ್ ಕಂಪನಿಗೆ 250 ಮತ್ತು ಕೊಟಾರಿ ಕಂಪನಿಗೆ 60 ತುಂತುರು ನೀರಾವರಿ ಸಲಕರಣೆ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಈ ಪೈಕಿ 87 ಲಾನುಭವಿ ರೈತರಿಗೆ ಈಗಾಗಲೇ ಸ್ಪಿಂಕ್ಲರ್ ಜೆಟ್ ಮತ್ತು ಪೈಪ್‌ಗಳನ್ನು ನೀಡಲಾಗಿದೆ. ಬಾಕಿ ಇರುವ ರೈತರಿಗೂ ವಿತರಣೆ ಮಾಡಲಾಗುವುದು ಎಂದರು.
ಜೆಟ್ ಮತ್ತು ಪೈಪ್‌ಲೈನ್‌ಗಳಿಗೆ ಸರ್ಕಾರ ಶೇ.90 ರಿಯಾಯಿತಿ ನೀಡಿದ್ದು, ರೈತರು ಕೇವಲ 4139 ರೂ.ಗಳನ್ನು ಪಾವತಿಸಿ 30 ಗುಣಮಟ್ಟದ ಪೈಪ್ ಹಾಗೂ 5 ಜೆಟ್‌ಗಳನ್ನು ಪಡೆಯಯಬಹುದು. ಈ ಹಣವನ್ನು ಬ್ಯಾಂಕ್‌ನಲ್ಲಿ ರೈತರ ಆರ್‌ಟಿಜಿಎಸ್ ಮೂಲಕ ಪಾವತಿಸಬೇಕು ಎಂದರು.
ಎಮ್ಮೆದೊಡ್ಡಿ ರೈತ ಈಶ್ವರಪ್ಪ ಮಾತನಾಡಿ, ಹಿಂಗಾರು ಬೆಳೆ ಹಾಗೂ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಸರ್ಕಾರ ಸ್ಪಿಂಕ್ಲರ್ ಜೆಟ್‌ಗಳನ್ನು ವಿತರಿಸಿರುವುದರಿಂದ ನಮಗೆ ಅನುಕೂಲವಾಗಲಿದೆ. ಇವು ಮೊದಲೇ ನಮ್ಮ ಬಳಿ ಇದ್ದಿದ್ದರೆ ಮುಂಗಾರಿನಲ್ಲಿ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ಈ ಬಾರಿ ಹಿಂಗಾರಿಗೆ ಇದರ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net