ರೈತರಿಗೆ ಬಿತ್ತನೆ ಬೀಜದ ವಿತರಣೆ

24M.D.R.4
ಮದ್ದೂರು ಪಟ್ಟಣದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ 2024-25ನೇ ಸಾಲಿನ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಶಾಸಕ ಕೆ.ಎಂ.ಉದಯ್ ತರಕಾರಿ ಬಿತ್ತನೆ ಬೀಜ ವಿತರಣೆ ಮಾಡಿದರು. ಕೆ.ಎಂ.ರೇಖಾ, ಸಿ.ಡಿ.ಗಂಗಾಧರ್ ಇದ್ದರು.
Published on

ಮದ್ದೂರು: ಪಟ್ಟಣದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ತರಕಾರಿ ಬಿತ್ತನೆ ಬೀಜದ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ವಿವಿಧ ಯೋಜನೆಗಳಡಿ ಹತ್ತು ಹಲವು ಉಪಯುಕ್ತ ಕಾರ್ಯಗಳಿಗೆ ನೆರವು ನೀಡುತ್ತಿದ್ದು, ಇದರ ಸದುಪಯೋಗದ ಜತೆಗೆ ತೋಟಗಾರಿಕಾ ಬೆಳೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಬಲಗೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ಅಗತ್ಯ ಬಿತ್ತನೆ ಬೀಜ, ರೋಗ ಮತ್ತು ಕೀಟ ನಿರೋಧಕ ಔಷಧಿಗಳು, ಹನಿ, ತುಂತುರು ನೀರಾವರಿ ಯೋಜನೆಯ ಪರಿಕರಗಳು ರಿಯಾಯಿತಿ ಯೋಜನೆಗಳ ಮೂಲಕ ಲಭ್ಯವಿದ್ದು, ಯೋಜನೆಗಳ ಸದ್ಬಳಕೆ ಮುಂದಾಗಬೇಕು. ಏಕಬೆಳೆ ಪದ್ಧತಿಯನ್ನು ಬದಿಗಿಟ್ಟು ಬಹುಬೆಳೆ ಪದ್ಧತಿ, ಹನಿ ನೀರಾವರಿ ಅಳವಡಿಕೆ ಮೂಲಕ ನೀರಿನ ಮಿತ ಬಳಕೆ ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಬೇಕು. ವರ್ಷವಿಡೀ ಆದಾಯದ ಮಟ್ಟವನ್ನು ನಿರೀಕ್ಷಿಸಲು ಈ ಕ್ರಮಗಳಿಂದ ಸಾಧ್ಯವೆಂದು ಹೇಳಿದರು.

ಅಧಿಕಾರಿಗಳು ರೈತರಿಗೆ ಅಗತ್ಯವಿರುವ ಮಾಹಿತಿಗಳನ್ನು ಕಾಲಕಾಲಕ್ಕೆ ನೀಡುವ ಜತೆಗೆ ಇಲಾಖೆ ವತಿಯಿಂದ ಸಿಗುವ ಯೋಜನೆಗಳು, ಪರಿಕರಗಳು ಹಾಗೂ ಬಿತ್ತನೆ ಬೀಜಗಳ ವಿತರಣೆಗೆ ಮುಂದಾಗುವಂತೆ ಸ್ಥಳದಲ್ಲಿದ್ದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಪ್ರಗತಿಪರ ಕೃಷಿಕರು ಹಾಗೂ ಅರ್ಹ ಫಲಾನುಭವಿ ರೈತರಿಗೆ ಮಂಡ್ಯ ಜಿ.ಪಂ. ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ತರಕಾರಿ ಬಿತ್ತನೆ ಬೀಜಗಳ ಕಿಟ್‌ಗಳನ್ನು ವಿತರಿಸಲಾಯಿತು.

ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಕೆ.ಎಂ.ರೇಖಾ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net