ಪೌರಕಾರ್ಮಿಕರಿಗೆ ಶೂ, ಕೈಗ್ಲೌಸ್ ವಿತರಣೆ

3-NPK-1
ನಾಪೋಕ್ಲು ಲಯನ್ಸ್ ಕ್ಲಬ್‌ವತಿಯಿಂದ ಪೌರ ಕಾರ್ಮಿಕರಿಗೆ ಶೂ ಮತ್ತು ಕೈ ಗ್ಲೌಸ್‌ಅನ್ನು ವಿತರಿಸಿ ಗೌರವಿಸಲಾಯಿತು.
Published on

ನಾಪೋಕ್ಲು: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಪೌರಕಾರ್ಮಿಕರಿಗೆ ಶೂ ಮತ್ತು ಕೈಗ್ಲೌಸ್ ವಿತರಿಸಿ ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಬಿ.ಕುಟಪ್ಪ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಅಂಗವಾಗಿ ಇಲ್ಲಿನ ಮಹಿಳಾ ಸಮಾಜದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಟ್ಟಣದ ಪೌರಕಾರ್ಮಿಕರಾದ ವಿಶ್ವ, ಸೋಮಣ್ಣ, ರವಿ ಅವರಿಗೆ ಬೂಟು ಮತ್ತು ಕೈ ಬ್ಲೌಸ್‌ಅನ್ನು ವಿತರಿಸಿ ಸನ್ಮಾನಿಸಲಾಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಬನ್ಸಿಭೀಮಯ್ಯ, ಖಜಾಂಚಿ ವಸಂತಾ ಮುತ್ತಪ್ಪ, ಸುಧಿ ತಿಮ್ಮಯ್ಯ, ರೇಷ್ಮಾ ಉತ್ತಪ್ಪ, ರಘು ತಿಮ್ಮಯ್ಯ, ಮೇರಿ ಚೆಟ್ಟಿಯಪ್ಪ, ಶುಭಾಷ್ ತಿಮ್ಮಯ್ಯ, ರೇಖಾ ಪೊನ್ನಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net