

ದಾಂಡೇಲಿ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನೀಡಲಾಗುವ ಮೂರು ಯಂತ್ರಚಾಲಿತ ಸ್ಕೂಟರ್ಗಳನ್ನು ಫಲಾನುಭವಿಗಳಾದ ಇಕ್ಬಾಲ್ ಮೊಹಮ್ಮದ್ ಶೇಖ್, ಸಾವಿತ್ರಿ ವಿಠು ಪಿಂಗಳೆ ಹಾಗೂ ದಿಲವಾರ್ ಎನ್. ನದಾಫ್ ಎಂಬುವವರಿಗೆ ಶಾಸಕ ಆರ್.ವಿ ದೇಶಪಾಂಡೆ ವಿತರಿಸಿದರು.
ನಗರಸಭೆ ಪೌರಾಯುಕ್ತ ರಾಜರಾಮ ಪವಾರ, ತಾಪಂ ಇಒ ಪ್ರಮೋದ್ ಮಹಾಲೆ, ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ಉಪಾಧ್ಯಕ್ಷ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಜಾಧವ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಹಾಗೂ ನಗರಸಭೆ ಸದಸ್ಯರು, ವಿವಿಧೋದ್ದೇಶ ಪುನರ್ವಸತಿ ಕೇಂದ್ರ ಕಾರ್ಯಕರ್ತರು ಸುನೀತಾ ಶಪೂರಕರ, ರಾಮದಾಸ್ ನಾಯ್ಕ, ನಾಗಯ್ಯ ಪೂಜಾರಿ, ಪಂಡಿತ ಪಾಟೀಲ, ಮುತ್ತಪ್ಪ ಇದ್ದಲಗಿ, ಸಕ್ಕಬಾಯಿ ಪಟಗಾರೆ, ಇತರರು ಉಪಸ್ಥಿತರಿದ್ದರು.