

ಕುಂದಾಪುರ: ತಲ್ಲೂರಿನ ಸಪ್ತಸ್ವರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಘದ ತಲ್ಲೂರಿನ ಪ್ರದಾನ ಕಚೇರಿಯಲ್ಲಿ ಭಾನುವಾರ ನಡೆಯಿತು.
ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಇತರ ಸಹಕಾರಿ ಸಂಘಗಳ ನೌಕರರ ಒಕ್ಕೂಟ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಶುಭಾಶಂಸನೆಗೈದರು. ಯೂನಿಯನ್ ಬ್ಯಾಂಕ್ ಸಹಾಯಕ ಮುಖ್ಯ ಪ್ರಬಂಧಕ ಮಹಾಲಿಂಗ ದೇವಾಡಿಗ ಸಂಘದ ಕಾರ್ಯವೈಖರಿ, ಸಾಮಾಜಿಕ ಕೈಂಕರ್ಯವನ್ನು ಶ್ಲಾಘಿಸಿದರು.
ಭಾರತೀಯ ಸೇನೆಯಿಂದ ನಿವೃತ್ತರಾದ ಕ್ಯಾಪ್ಟನ್ ರಾಜೇಶ್ ದೇವಾಡಿಗ, ರಾಜ್ಯ ನಿರೂಪಣಾ ರತ್ನ ಪ್ರಶಸ್ತಿ ಪಡೆದ ರಾಮ ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಸಮಿತಿ ಸದಸ್ಯರಾಗಿ ಆಯ್ಕೆಯಾದ ರಘುರಾಮ್ ದೇವಾಡಿಗ ಆಲೂರು, ಅಗ್ನಿಪಥ್‌ನಿಂದ ಭಾರತೀಯ ಸೇನೆಗೆ ಆಯ್ಕೆಯಾದ ರೋಹಿತ್ ದೇವಾಡಿಗ ಕೆರ್ಗಾಲು, ರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಸಚ್ಚಿದಾನಂದ ದೇವಾಡಿಗ ಅಲೂರು ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಚಂದ್ರಶೇಖರ ದೇವಾಡಿಗ, ನಿರ್ದೇಶಕರು, ಶಾಖಾ ವ್ಯವಸ್ಥಾಪಕ ಕರುಣಾಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ರಾಜೇಶ್ ದೇವಾಡಿಗ ತ್ರಾಸಿ ಪ್ರಸ್ತಾವಿಸಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿಶಾಲ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ಗುರುಪ್ರಸಾದ್ ದೇವಾಡಿಗ ಮಾರಣಕಟ್ಟೆ ನಿರೂಪಿಸಿದರು. ಶೀಲಾವತಿ ದೇವಾಡಿಗ ವಂದಿಸಿದರು.