

ತಾವರಗೇರಾ: ಸ್ಥಳೀಯ ಪಪಂ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2.0 (ನಗರ) ಹೌಸಿಂಗ್ ಫಾರ್ ಆರ್ ಯೋಜನೆಯಡಿ ಅಂಗೀಕಾರ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳ ಮನೆಗೆ ಗುರುವಾರ ಪಪಂ ಸಿಬ್ಬಂದಿ ಭೇಟಿ ನೀಡಿ ಸಸಿಗಳನ್ನು ವಿತರಿಸಿದರು. ಪಪಂ ಉಪಾಧ್ಯಕ್ಷೆ ದುರುಗಮ್ಮ ಶಿರವಾಟಿ, ಸಿಬ್ಬಂದಿ ಪ್ರಲ್ಲಾದ ಜೋಶಿ, ಅಬ್ದುಲ್ ರಝಾಕ್, ಖಾಜಾಹುಸೇನ, ಶಾಮೂರ್ತಿ, ಶರಣಬಸವ ಇದ್ದರು.