ಸಸಿ, ಹಣ್ಣಿನ ಬೀಜದುಂಡೆಗಳ ವಿತರಣೆ

sid
Published on

ಆರ್ಡಿ: ಮಡಾಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಚರ ಇಕೊ ಕ್ಲಬ್, ಅರಣ್ಯ ಇಲಾಖೆ ಹೆಬ್ರಿ ವಲಯದ ಅಲ್ಬಾಡಿ ಘಟಕದ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಿವೃತ್ತ ಮುಖ್ಯಶಿಕ್ಷಕ ಅನಂತ ತಂತ್ರಿ ಮಡಾಮಕ್ಕಿ ಶಾಲಾ ವಠಾರದಲ್ಲಿ ಗಿಡಗಳನ್ನು ನೆಟ್ಟರು.

ವನಮಹೋತ್ಸವ ಹಾಗೂ ಬೀಜೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಗಿಡಗಳು ಹಾಗೂ ಹಣ್ಣಿನ ಬೀಜದ ಉಂಡೆಗಳನ್ನು ವಿತರಿಸಲಾಯಿತು.

ಅರಣ್ಯ ಇಲಾಖೆ ಹೆಬ್ರಿ ವಲಯದ ಅಲ್ಬಾಡಿ ಘಟಕ ಉಪ ವಲಯಾರಣ್ಯಾಧಿಕಾರಿ ಹೇಮಾ, ಗಸ್ತು ಅರಣ್ಯ ಪಾಲಕರಾದ ರಾಘವೇಂದ್ರ, ಮಲ್ಲಯ್ಯ, ಬಿಆರ್‌ಪಿ ಸುಕನ್ಯಾ, ಸಿಆರ್‌ಪಿ ನಾಗರಾಜ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಮುಖ್ಯ ಶಿಕ್ಷಕ ಅಶೋಕ, ಸಹ ಶಿಕ್ಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net