ಶಾಲಾ ಮಕ್ಕಳಿಗೆ ಸಂಸ್ಕಾರ ನೋಟ್ ಬುಕ್ ವಿತರಣೆ: ಹಿಂದು ಜನಜಾಗೃತಿ ಸಮಿತಿಯಿಂದ ಉಪಕ್ರಮ

school book
Published on

ಬೆಂಗಳೂರು: ಮೂಡಲಪಾಳ್ಯದ ಸರಸ್ವತಿನಗರದ ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳಿಗೆ ಹಿಂದು ಜನಜಾಗೃತಿ ಸಮಿತಿ ವತಿಯಿಂದ ‘ಸಮಾಜ ಸಹಾಯ ಅಭಿಯಾನ’ ಅಡಿಯಲ್ಲಿ ಸಂಸ್ಕಾರ ನೋಟ್ ಬುಕ್ ವಿತರಿಸಲಾಯಿತು.

ಸಂಸ್ಕಾರ ನೋಟ್ ಬುಕ್‌ನಲ್ಲಿ ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿಚೆನ್ನಮ್ಮ ಅವರಂತಹ ವೀರ ವನಿತೆಯರ, ಛತ್ರಪತಿ ಶಿವಾಜಿ ಮಹಾರಾಜರು, ಶ್ರೀಕೃಷ್ಣ ದೇವರಾಯರಂತಹ ಧರ್ಮನಿಷ್ಠರು, ಆಯುರ್ವೇದ ಪಿತಾಮಹ ಚರಕ ಹಾಗೂ ಹಲವು ಸ್ವಾತಂತ್ರ್ಯ ಹೋರಾಟಗಾರರ ರಾಷ್ಟ್ರ ಪ್ರೇಮದ ಮಾಹಿತಿ ಒಳಗೊಂಡಿದೆ.

ಈ ಸಂದರ್ಭದಲ್ಲಿ ಸಮಿತಿಯ ನಗರ ಘಟಕದ ಪದಾಧಿಕಾರಿ ಸವಿತ ಕ್ಷಾತ್ರ ಮಾತನಾಡಿ, ಮಕ್ಕಳಿಗೆ ನಾವು ಅಭ್ಯಾಸಕ್ಕಿಂತ ಮೊದಲು ದೇವರ ಪ್ರಾರ್ಥನೆಯನ್ನು ಮಾಡಿದರೆ ನಮ್ಮ ಸ್ಮರಣ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ. ಸುಸಂಸ್ಕಾರ ಬೆಳೆಸಿಕೊಳ್ಳುವುದರ ಮೂಲಕ ದೇಶಕ್ಕೆ ಒಳ್ಳೆಯ ಪ್ರಜೆಗಳಾಗುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಹಿಂದು ಜನಜಾಗೃತಿ ಸಮಿತಿಯು ಕಳೆದ 22 ವರ್ಷಗಳಿಂದ ಸಮಾಜದಲ್ಲಿನ ಜನರಿಗೆ ರಾಷ್ಟ್ರಪ್ರೇಮ, ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಾ ಬಂದಿದೆ. ನೈತಿಕ ಮೌಲ್ಯಗಳಿಂದ ಭ್ರಷ್ಟವಾಗುತ್ತಿರುವ ಸಮಾಜಕ್ಕೆ ಧರ್ಮಶಿಕ್ಷಣದ ಮೂಲಕ ಧರ್ಮಪ್ರೇಮವನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ಸಮಿತಿಯ ಕಾರ್ಯಕತೆರ್ಯರಾದ ರಜನಿ, ಶರಾವತಿ, ಸಂಧ್ಯಾ, ತೇಜಸ್ವಿನಿ, ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net