ಕಡ್ಡಾಯವಾಗಿ ಧರಿಸಿ ಸುರಕ್ಷತಾ ಸಾಧನ

Prabhakara 1
Published on

ಅಧ್ಯಕ್ಷ ಪ್ರಭಾಕರ ಪೂಜಾರಿ ಎಚ್ಚರಿಕೆ

ಯುಜಿಡಿ ಕಾರ್ಮಿಕರಿಗೆ ಕಿಟ್​ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರ ಕಾರ್ಮಿಕರ ಆರೋಗ್ಯ ಹಾಗೂ ಜೀವ ರಕ್ಷಣೆಯ ಹಿನ್ನೆಲೆಯಲ್ಲಿ ಸುರಕ್ಷತಾ ಸಾಧನಗಳನ್ನು ನೀಡುತ್ತೇವೆ. ಆದರೆ, ತಾವುಗಳು ಅವುಗಳನ್ನು ಧರಿಸಿದೆ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಕಡ್ಡಾಯವಾಗಿ ಸುರಕ್ಷತಾ ಸಾಧನ ತೊಟ್ಟು ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಹೊರ ಗುತ್ತಿಗೆ ನೌಕರರನ್ನು ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಎಚ್ಚರಿಕೆ ನೀಡಿದರು.

Prabhakara 2
ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ (ಅ.3) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಉಡುಪಿ ನಗರಸಭೆಯ ಯುಜಿಡಿ ಕಾರ್ಮಿಕರಿಗೆ ಮಂಜೂರಾದ ಸುರಕ್ಷಾ ಪರಿಕರಗಳ ಕಿಟ್​ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಮಣಿಪಾಲ, ವಿಜಯ ಕೊಡವೂರು, ಸದಸ್ಯರಾದ ರಶ್ಮಿ ಸಿ. ಭಟ್​, ಪರಿಸರ ಅಭಿಯಂತ ರವಿಪ್ರಕಾಶ, ಆರೋಗ್ಯ ನಿರೀಕ್ಷಕರಾದ ಪ್ರಕಾಶ ಪ್ರಭು, ಹರೀಶ ಬಿಲ್ಲವ, ಸತೀಶ ಉಪಸ್ಥಿತರಿದ್ದರು.

ನಗರದಲ್ಲಿ ಯುಜಿಡಿ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಕಾರ್ಮಿಕರಿಗೆ ಗುಣಮಟ್ಟದ ಶೂ, ಸಾಕ್ಸ್​, ಕೈಗವಸು, ಮಾಸ್ಕ್​ ಎಲ್ಲವನ್ನೂ ನೀಡುತ್ತೇವೆ. ಆದರೆ, ತಮಗೆ ನೀಡಿರುವ ಈ ಕಿಟ್​ಗಳ ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಇನ್ನು ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಸಹಿಸುವುದಿಲ್ಲ. | ಪ್ರಭಾಕರ ಪೂಜಾರಿ. ಉಡುಪಿ ನಗರಸಭಾ ಅಧ್ಯಕ್ಷ.s

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net