ಮನೆ ಮನೆಗೆ ಪವಿತ್ರ ಅಕ್ಷತೆ ವಿತರಣೆ

11sdp2_ RAM MANDIR AKSHATE
Published on

ಸಿದ್ದಾಪುರ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಜ. 22ರಂದು ಆಯೋಜಿಸಿರುವ ರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದಾಪುರ ಪಟ್ಟಣದ ಹೊನ್ನೆಗುಂಡಿಯ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ಪವಿತ್ರ ಅಕ್ಷತೆ ನೀಡಿದರು.


ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ಗುರುರಾಜ್ ಶಾನಭಾಗ್, ತೋಟಪ್ಪ ನಾಯ್ಕ, ಮಂಜುನಾಥ ಭಟ್ಟ,ವಿ.ಎಂ. ಭಟ್ಟ, ಪ್ರಕಾಶ ಹೆಗಡೆ ಗುಂಜಗೋಡ, ನರಹರಿ ಡೊಂಗ್ರೆ,ಸಂತೋಷ ಹುಲೇಕಲ್, ಸುರೇಶ ಬಾಲಿಕೊಪ್ಪ, ಎ.ಜಿ. ನಾಯ್ಕ, ಜ್ಯೋತಿ ಹೆಗಡೆ, ಶಾಮಲ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net