ರಂಜಾನ್​ ಹಬ್ಬದ ಆಹರ ಕಿಟ್​ ವಿತರಣೆ

Distribution of Ramadan food kits
ವಿಜಯಪುರದ ಮುಳ್ಳಗಸಿ ಬಳಿ ಬಡ ಕುಟುಂಬಗಳಿಗೆ ರಂಜಾನ್​ ಹಬ್ಬದ ಹಿನ್ನೆಲೆಯಲ್ಲಿ ಆಹಾರ ಕಿಟ್​ ವಿತರಿಸಲಾಯಿತು. ಪೂಜಾ ಬುರಾಣಪೂರ, ಅಂಬಿಕಾ ಬುರಾಣಪೂರ ಮತ್ತಿತರರಿದ್ದಾರೆ.
Published on

ವಿಜಯಪುರ: ರಂಜಾನ್​ ಹಬ್ಬವು ದಾನ ಧರ್ಮದ ಸಂಕೇತವಾಗಿದೆ. ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೋಲಿಸದೆ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಕ್ಕೆ ಆಹಾರ ಕಿಟ್​ ವಿತರಿಸಿರುವುದು ಸಂತಸ ತಂದಿದೆ ಎಂದು ಜಿಪಂ ಸಾಂಖಿಕ ಅಧಿಕಾರಿ ರಾ. ಬಹಾದ್ದೂರ ಹೇಳಿದರು.

ನಗರದ ಮುಳ್ಳಗಸಿ ಬಳಿ ಇತ್ತೀಚೆಗೆ ಬಡ ಕುಟುಂಬಗಳಿಗೆ ರಂಜಾನ್​ ಹಬ್ಬದ ಹಿನ್ನೆಲೆಯಲ್ಲಿ ಚಂದ್ರಶೇಖರ ಬುರಾಣಪುರ ಕುಟುಂಬದ ವತಿಯಿಂದ 150 ಕುಟುಂಬಗಳಿಗೆ ಆಹಾರ ಕಿಟ್​ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುರಾಣಪುರ ಕುಟುಂಬದವರು ದೀಪಾವಳಿ, ರಂಜಾನ್​ ಸೇರಿ ವುುಂತಾದ ಯಾವುದೇ ಹಬ್ಬಗಳಿದ್ದರೂ ಬಡವರಿಗೆ ಆಹಾರ ಕಿಟ್​ ನೀಡುವ ಮೂಲಕ ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೂಜಾ ಬುರಾಣಪೂರ ಮಾತನಾಡಿದರು.

ಜಿಪಂ ಲೆಕ್ಕಾಧಿಕಾರಿ ಅನ್ವರ ನದಾಫ್​, ಅಂಬಿಕಾ ಬುರಾಣಪೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net