ತಂಬಿಟ್ಟಿನಾರತಿ ಮಾಡಿದ ಮಹಿಳೆಯರಿಗೆ ಬಹುಮಾನ ವಿತರಣೆ

01M.D.R.4
ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ತಂಬಿಟ್ಟಿನಾರತಿ ಮಾಡಿದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಗುರುಮಲ್ಲೇಶ್, ನಂದೀಶ್ ಇದ್ದರು.
Published on

ಮದ್ದೂರು: ಪಟ್ಟಣದ ಶಿವಪುರದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ತಂಬಿಟ್ಟಿನಾರತಿ ಮಾಡಿದ 8 ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸೋಮವಾರ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವ ಅದ್ದೂರಿಯಾಗಿ ನಡೆದಿತ್ತು. ಮಂಗಳವಾರ ಮದ್ದೂರಮ್ಮನಿಗೆ ತಂಪೆರೆಯಲು ತಂಬಿಟ್ಟಿನಾರತಿ ಮಾಡಲಾಗಿತ್ತು. ಇದನ್ನು ಮಾಡಿದ 8 ಮಹಿಳೆಯರಿಗೆ ಬೆಳ್ಳಿ ಲಕ್ಷ್ಮೀ ವಿಗ್ರಹ, ಕಾಯಿನ್, ಕುಕ್ಕರ್‌ಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮಾಜಿ ಉಪಾಧ್ಯಕ್ಷ ಗುರುಮಲ್ಲೇಶ್ ಮಾತನಾಡಿ, ತಂಬಿಟ್ಟಿನಾರತಿ ನಮ್ಮ ಸಂಸ್ಕೃತಿಯ ಪ್ರತೀಕ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ತಂಬಿಟ್ಟಿನಾರತಿ ಮಾಡುವುದು ಸಹಜ. ಇದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉತ್ತಮವಾಗಿ ತಂಬಿಟ್ಟಿನಾರತಿ ಮಾಡಿದ ಮಹಿಳೆಯರಿಗೆ ಶಿವಪುರ ಗ್ರಾಮಸ್ಥರ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು ಎಂದರು.

ಪುರಸಭಾ ಸದಸ್ಯರಾದ ಲತರಾಮು, ನಂದೀಶ್, ಮಾಜಿ ಸದಸ್ಯ ಲಿಂಗಯ್ಯ, ಮುಖಂಡರಾದ ಮಹೇಶ್, ಕೋಟಿ ಚಂದ್ರಶೇಖರ್, ಮಂಜು, ಗುರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net