

ಹೊಳೆನರಸೀಪುರ: ಪಟ್ಟಣ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಆಯುಧಪೂಜಾ ಮಹೋತ್ಸವ ಸೋಮವಾರ ಸರಳ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿತು.
ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ವಾಹನಗಳು ಹಾಗೂ ಉಪಕರಣಗಳಿಗೆ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು. ಡಿವೈಎಸ್ಪಿ ಅಶೋಕ್, ವೃತ್ತ ನಿರೀಕ್ಷಕ ಪ್ರದೀಪ್, ಸಬ್ ಇನ್‌ಸ್ಪೆಕ್ಟರ್ ಅರುಣ್ ಹಾಗೂ ಸಿಬ್ಬಂದಿ ಇದ್ದರು.
ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಆವರಣದಲ್ಲಿ ಅರ್ಚಕರಿಂದ ವಾಹನಗಳಿಗೆ ಪೂಜೆ ಮಾಡಿಸಲು ಸಾಲು ಸಾಲು ವಾಹನಗಳು ನಿಂತಿದ್ದವು.