

ಕಂಪಲಾಪುರ: ಇಲ್ಲಿನ ಬಿ.ಎಂ.ರಸ್ತೆಯಲ್ಲಿರುವ ಸುಶೀಲಾ ಹಾಗೂ ನರ್ಪತ್ ಸಿಂಗ್ ಕುಟುಂಬದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿ ಗಣೇಶೋತ್ಸವ ಆಚರಿಸುವ ಮೂಲಕ ಶುಕ್ರವಾರ ಸಾಂಪ್ರದಾಯಿಕವಾಗಿ ಮೂರ್ತಿ ವಿಸರ್ಜಿಸಲಾಯಿತು.
ಸುಮಾರು 6 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಮನೆಯ ಮುಂಭಾಗ ಪ್ರತಿಷ್ಠಾಪನೆ ಮಾಡಿ ಪ್ರತಿ ದಿನ ಸಂಜೆ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಿದರು.
ಉಡುಪಿಯ ಮಹಾಲಿಂಗೇಶ್ವರ ಚಂಡೆ ಕಲಾವಿದರ ಶಬ್ಧಕ್ಕೆ ರಾಜಸ್ಥಾನಿ ಮಹಿಳೆಯರು ನೃತ್ಯ ಮಾಡಿ ಸಂಭ್ರಮಿಸಿದರು.
ಸುಳ್ಯದ ಮಂಜು ಬ್ರದರ್ಸ್ ನಾಸಿಕ್ ಬ್ಯಾಂಡ್‌ನೊಂದಿಗೆ ಪ್ರಮುಖ ಬೀದಿಗಳಲ್ಲಿ ಗೌರಿ-ಗಣೇಶ ಮೂರ್ತಿಯನ್ನು ಮೆರವಣಿಗೆ ನಡೆಸಿ ಹೆಗ್ಗೆರೆಯಲ್ಲಿ ವಿಸರ್ಜಿಸಲಾಯಿತು.
ಪೂಜಾಕಾರ್ಯದಲ್ಲಿ ಕುಲದೀಪ್ ಸಿಂಗ್, ಚಿಂಟು ಗೆಳೆಯರ ಬಳಗ ಹಾಗೂ ರಾಜಸ್ಥಾನ ಸಮಾಜದವರು ಪಾಲ್ಗೊಂಡಿದ್ದರು.